• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಗೋ ಸಮ್ಮೇಳನ : ದಿನ-8ಗವ್ಯೊದ್ಯಮ ವಿಕಾಸ ರಾಷ್ಟ್ರದ ವಿಕಾಸ : ರಾಘವೇಶ್ವರ ಶ್ರೀ

By Staff
|


ಏ.21ರಿಂದ ಹೊಸನಗರದ ಶ್ರೀರಾಮಚಂದ್ರಾಪುರದ ಮಠದಲ್ಲಿ ನಡೆಯುತ್ತಿರುವ ವಿಶ್ವ ಗೋ ಸಮ್ಮೇಳನಕ್ಕೆ, ಭಾನುವಾರ(ಮಾ.29) ತೆರೆ. ಲಕ್ಷಾಂತರ ಮಂದಿ ವಿಶ್ವ ಗೋ ಸಮ್ಮೇಳನದಲ್ಲಿ ಪಾಲ್ಗೊಂಡು ಪುಳಕಿತರಾಗಿದ್ದಾರೆ. ಸಮ್ಮೇಳನದ ಕೆಲವು ತುಣುಕುಗಳು ನಿಮಗಾಗಿ...

ಗ್ರಾಮಮಟ್ಟದಲ್ಲಿ ಗವ್ಯೊದ್ಯಮ ವಿಕಾಸಗೊಳ್ಳುವುದರಿಂದ ರಾಷ್ಟ್ರದ ವಿಕಾಸ ಸಾಧ್ಯ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ವಿಶ್ವ ಗೋ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ, ಇದರ ಲಾಭ ಸಂಪೂರ್ಣವಾಗಿ ರೈತರಿಗೆ ಸಿಗುವಂತಾಗಬೇಕು. ಕಾರಣ ಅತಿಯಾದ ವಾಣಿಜ್ಯೀಕರಣದಿಂದ ದೊಡ್ಡ ಉದ್ಯಮಿಗಳ ಪಾಲಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದರು.

ಒಂದು ಕಾಲದಲ್ಲಿ ವಿನಿಮಯ ಸಾಧನವಾಗಿತ್ತು. ಮನುಷ್ಯನ ಆರ್ಥಿಕ ಸ್ಥಿತಿಗತಿಯನ್ನು ಆತ ಹೊಂದಿರುವ ಗೋವುಗಳ ಸಂಖ್ಯೆ ಮೇಲೆ ನಿಶ್ಚಿಯಿಸಲಾಗುತ್ತಿತ್ತು. ಅಂದರೆ ಗೋವು ಭಾರತದ ಅರ್ಥಶಾಸ್ತ್ರ ಆಗಿತ್ತು. ಇಂದು ಗೋವಿದ್ದರೆ ಆ ಮನೆಯ ಹೆಣ್ಣು ಕೊಡಲು ಹಿಂಜರಿಯುವಂತಹ ಪರಿಸ್ಥಿತಿ ಇದೆ ಎಂದು ಶ್ರೀಗಳು ವಿಷಾದಿಸಿದರು.

ಇಂದು ಸಹ ದೇಶದ ಶೇ 60ರಷ್ಟು ಎತ್ತಿನ ಗಾಡಿಯಲ್ಲಿ ಸಾಗಾಣಿಕೆಯಾಗುತ್ತದೆ. ಇದರಿಂದ ದೇಶಕ್ಕೆ ಇಂಧನ ವೆಚ್ಚದಲ್ಲಿ ಆರವತ್ತು ಸಾವಿರ ಕೋಟಿ ಉಳಿತಾಯವಾಗುತ್ತದೆ. ಆಹಾರ ಉತ್ಪಾದನೆ ಶೇ 16ರಷ್ಟು ಕಡಿಮೆಯಾಗಿ ಆಮದು ಮಾಡಿಕೊಳ್ಳುವ ಸ್ಥಿತಿಬಂದಿದೆ. ಇದು ಗೋ ಹತ್ಯೆಯ ಶಾಪದ ಫಲ ಎಂದರು.

***

ಭಾರತವನ್ನು ಆಳುತ್ತಿರುವವರು ಯಾರು?

ದೇಶದ ಸಂಸ್ಕೃತಿ ಮತ್ತು ಜೀವನವೇ ಆಗಿರುವ ಗೋ ಹತ್ಯೆಯೂ ನಿರಂತರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ದೇಶವನ್ನು ಆಳುತ್ತಿರುವವರು ಭಾರತೀಯರೊ ಇಲ್ಲ ಪರಕೀಯರೊ ಎಂಬ ಅನುಮಾನ ಕಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರವೀಣ ಭಾಯಿ ತೊಗಾಡಿಯ ಹೇಳಿದರು.

ವಿಶ್ವ ಗೋ ಸಮ್ಮೇಳನದಲ್ಲಿ ಋಷಿ-ರಾಜ-ಸಮಾಜ ಸಭಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಪರಂಪರೆಯೇ ಗಾಳಿ, ನೀರು, ಪರಿಸರ ಗೋವುಗಳನ್ನು ದೇವರೆಂದು ಭಾವಿಸುತ್ತದೆ. ಅಂತಹ ಭಾವನೆಗಳಿಗೆ ಧಕ್ಕೆ ತರುವಂತೆ ಗೋ ಹತ್ಯೆ ನಡೆಯುತ್ತಿರುವುದು ಆಡಳಿತಗಾರರ ಇಚ್ಚಾಶಕ್ತಿ ಕೊರತೆಯನ್ನು ತೋರಿಸುತ್ತಿದೆ ಎಂದ ಅವರು ಗೋ ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ದೇಶದ ಪ್ರತಿಯೊಬ್ಬರೂ ಒಂದು ಗೋವನ್ನು ಸಾಕುವ ದೀಕ್ಷೆ ತೊಡಬೇಕು ಮತ್ತು ಗೋ ಹತ್ಯೆ ಆಗದಂತೆ ಮಾಡುವ ಪಣ ತೊಡಬೇಕೆಂದರು.

***

ಕೃಷಿ ವೆಚ್ಚ ಕಡಿಮೆ ಮಾಡಲು ಗೋವು ಬೇಕು

ಇತ್ತೀಚಿನ ದಿನಗಳಲ್ಲಿ ರೈತರು ಒಂದೇ ಬೆಳೆಯನ್ನು ಬೆಳೆಸುವ ಪ್ರವೃತ್ತಿ ಹೆಚ್ಚುತ್ತಿರುವ ಕಾರಣದಿಂದ, ಮಣ್ಣಿನ ಫಲವತ್ತತೆ ಕುಸಿದಿದ್ದರೆ ಯಾಂತ್ರೀಕರಣ ರಾಸಾಯನಿಕಗಳ ಬಳಕೆಯಿಂದ ಅಂತರ್ಜಲ ಕುಸಿದಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಸಂಚಾಲಕ ಕೆ. ಪಿ. ಅಗರವಾಲ್‌ ತಿಳಿಸಿದರು.

ಭಾರತೀಯ ಕೃಷಿ ಸಂಶೋಧನಾ ಇಲಾಖೆ ವಿಶ್ವಸಂಸ್ಥೆಯಿಂದ 1200 ಕೋಟಿ ರೂಪಾಯಿಗಳಲ್ಲಿ ಕಾನೂನಿನ ಮಟ್ಟದಲ್ಲಿ ಸಾಂಪ್ರದಾಯಿಕ ಕೃಷಿ ಮತ್ತು ಜೀವನ ಭದ್ರತೆ ಒದಗಿಸುವತ್ತ ಸಂಶೋಧನೆ ನಡೆಸಲು ಯೋಜಿಸಿದೆ. ಹೆಚ್ಚು ಬೆಳೆ ತೆಗೆಯಲು ಹೆಚ್ಚು ಬಂಡವಾಳ ಹೂಡುವ ಬದಲು ರೈತನ ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಬೇಕಾಗಿದೆ ಎಂದರು.

***

ಭಾರತೀಯ ಸಂಸ್ಕೃತಿಗೆ ಧರ್ಮವೇ ಆತ್ಮ

ಭಾರತೀಯ ಸಂಸ್ಕೃತಿಗೆ ಧರ್ಮವೇ ಆತ್ಮ. ಅಂತಹ ಧರ್ಮದ ಬೀಡಿನಲ್ಲಿ ಗೋವಿಗೆ ರಕ್ಷಣೆ ನೀಡಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ಹರಿಹರಮಠ ಲಕ್ಷ್ಮೀನರಸಿಂಹಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ವಿಶ್ವ ಗೋಸಮ್ಮೇಳನದ ಋಷಿ- ರಾಜ - ಸಮಾಜ ಸಭಾದಲ್ಲಿ ಆಶೀರ್ವಚನ ನೀಡಿದ ಅವರು ನಾವು ಆತ್ಮಾವಲೋಕನಕ್ಕೆ ಮುಂದಾಗುವ ಕಾಲ ಬಂದಿದೆ. ಈಗ ಮೌನವಾಗಿರಬಾರದು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿ, ಗೋ ಸಂರಕ್ಷಣಾ ಅಭಿಯಾನ ಆಂದೋಲನವಾಗಬೇಕು ಇದರೊಂದಿಗೆ ಪ್ರತಿಯೊಬ್ಬ ಭಾರತೀಯನಿಗೂ ನಮಗೆ ಗೋವು ಬೇಕು ಎನ್ನುವ ಭಾವನೆ ಉಂಟಾಗುವಂತಾಗಬೇಕು ಎಂದರು.

ತರುಣಮುನಿ ಸಾಗರ್‌ ಸಂದೇಶವನ್ನು ನೀಡಿ, ಗೋವು ಇಂದು ಧರ್ಮನೀತಿ ಮತ್ತು ರಾಜನೀತಿ ನಡುವೆ ಸಿಕ್ಕಿ ನರಳುತ್ತಿದೆ ಅದು ಬದಲಾಗಿ ಅರ್ಥ ನೀತಿಯೊಂದಿಗೆ ಜೋಡಿಸಬೇಕಿದೆ ಎಂದರು.

ರಾಜಸ್ಥಾನ ಪಥಮೇಡ ಗೋಪಾಲಗೋವರ್ಧನ ಗೋಶಾಲಾದ ಶ್ರೀದತ್ತಶರಣಾನಂದಜೀ ಸ್ವಾಮೀಜಿ, ನವದೆಹಲಿ ಮಹಾಶಕ್ತಿ ಮಠದ ಆಚಾರ್ಯಮಹಾಮಂಡಲೇಶ್ವರ ಶ್ರೀಸರ್ವಾನಂಧ ಸರಸ್ವತಿ ಸ್ವಾಮೀಜಿ, ಗುಡ್ಡದ ಮಲ್ಲಾರ ಶ್ರೀ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ, ಕೋಲ್ಕತ್ತ ಆಚಾರ್ಯ ವಿಜಯಯೋಗಿ ಸ್ವಾಮೀಜಿ, ಕಲಸಿಯ ನ್‌ಋಸಿಂಹಾನಂದ ಸ್ವಾಮೀಜಿ, ಕಾಳಿಕಾಂಬ ಮಠದ ಸ್ವಾಮೀಜಿ ಮತ್ತು ಬೆಂಡವಾಡ ವಿರಕ್ತಮಠದ ಗುರುಸಿದ್ದ ಸ್ವಾಮೀಜಿ ಮತ್ತಿತರರು ಇದ್ದರು.

***

ಇಂಧನ ವೆಚ್ಚವಿಲ್ಲದ ಶಕ್ತಿ ಗೋವಿನಿಂದ

ಮನುಷ್ಯನ ಬದುಕಿನ ಯಂತ್ರವನ್ನು ನಡೆಸುವ ಗೋವು ಈಗ ನೀರೆತ್ತುವ ಹಾಗೂ ಗಿರಣಿಗಳಿಗೆ ಅಳವಡಿಸುವ ಪಂಪುಗಳು ಚಾಲನೆಗೂ ತನ್ನ ಶಕ್ತಿ ನೀಡಿದೆ. ಇದು ಶ್ರೀ ಮಠದ ವಿಶ್ವ ಗೋ ಸಮ್ಮೇಳನದ ಪುಣ್ಯ ಕೋಟಿ ಪ್ರಪಂಚದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇದೇ ಯಂತ್ರದಿಂದ ವಿದ್ಯುತ್‌ ಉತ್ಪಾದನೆಯನ್ನು ಮಾಡಬಹುದು. ಒಂದು ಎತ್ತಿನ ಸಹಾಯದಿಂದ 12 ವೋಲ್ಟ್‌ ಬ್ಯಾಟರಿಯನ್ನು 12 ಆಂಪಿಯರ್ನಲ್ಲಿ ಚಾರ್ಜ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದೇ ಉಪಕರಣದಿಂದ ಹಿಟ್ಟಿನ ಗಿರಣಿಯನ್ನು ನಡೆಸಬಹುದು.

25 ಅಡಿ ಆಳದಿಂದ ನೀರನ್ನು ಎತ್ತಬಹುದು. ಅಂತೂ ಇದೊಂದು ಬಹು ಉಪಯೋಗಿ ಗೋಯಂತ್ರ. ಈ ಯಂತ್ರದಿಂದ ಯಾವ ಮಾಲಿನ್ಯವೂ ಹಾಗೂ ಇಂದನ ವೆಚ್ಚವೂ ಇಲ್ಲ.

ಪುಣೆಯ ಮಾಡರ್ನ್‌ ಎನೆರ್ಜಿ ಪಾರ್ಕ್‌ ಕಂಪನಿಯವರು ಈ ಯಂತ್ರವನ್ನು ತಯಾರಿಸುತ್ತಿದ್ದು , ಇದರ ಬೆಲೆ 30 ಸಾವಿರ ರೂಪಾಯಿ ,ಮಾತ್ರ. ಮಹಾರಾಷ್ಟ್ರದಲ್ಲಿ ಈಗಾಗಲೆ 200 ಮನೆಗಳಲ್ಲಿ ಬಳಕೆಯಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more