ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯತ್ನಗಳು ವಿಫಲ.. ಸಂದೀಪನ ಸಾವು ನ್ಯಾಯವೇ?

By Staff
|
Google Oneindia Kannada News

ರಾಯಚೂರು : ರಕ್ಷಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಅಂತಿಮವಾಗಿ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದ ಬಾಲಕ, ಗುರುವಾರ ಸಾವನ್ನಪ್ಪಿದ್ದಾನೆ.

ನೀರು ಮತ್ತು ಊಟವಿಲ್ಲದೇ ಎರಡೂವರೆ ದಿನ, ಸಾವು ಬದುಕಿನ ನಡುವೆ ಬಾಲಕ ಹೋರಾಟ ನಡೆಸಿದ್ದ. ನೀರಮಾನ್ವಿ ಗ್ರಾಮದಲ್ಲಿ ಮಾವಿನ ಹಣ್ಣು ಕೀಳಲು ಹೋಗಿ, ಎಂಟು ವರ್ಷದ ಬಾಲಕ ಸಂದೀಪ, ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಮಂಗಳವಾರ ಬಿದ್ದಿದ್ದ. ಹಟ್ಟಿ ಚಿನ್ನದ ಗಣಿಯ 50ಕ್ಕೂ ಹೆಚ್ಚು ಕುಶಲಮತಿಗಳು, ಬಾಲಕನ ರಕ್ಷಿಸಲು ನಡೆಸಿದ ಯತ್ನ ಫಲ ನೀಡಲಿಲ್ಲ.

ಜಾಂಡೀಸ್‌ ಪರಿಣಾಮ ಬಾಲಕನ ತಂದೆ, ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ. ಕ್ಯಾನ್ಸರ್‌ನಿಂದ ಆಸ್ಪತ್ರೆ ಸೇರಿರುವ ಸಂದೀಪನ ತಾಯಿಗೆ, ಈ ವಿಚಾರವನ್ನು ತಿಳಿಸದೇ ಮುಚ್ಚಿಡಲಾಗಿದೆ. ಸಂದೀಪ್‌ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಧನವನ್ನು ಈಗಾಗಲೇ ಪ್ರಕಟಿಸಿದೆ.

ಈ ಪ್ರದೇಶದಲ್ಲಿನ ಅತಿಹೆಚ್ಚು ತಾಪಮಾನ, ಸುರಂಗ ತೋಡುವಾಗಿನ ಕಂಪನದಿಂದ ಬಾಲಕನ ಬದುಕು ಇಕ್ಕಟ್ಟಿಗೆ ಸಿಲುಕಿತ್ತು.

(ಏಜನ್ಸೀಸ್‌)

ಫ್ಲಾಷ್‌ಬ್ಯಾಕ್‌ :
ಕೊಳವೆಬಾವಿಯಾಳಗೆ 48ಗಂಟೆ! : ಪಾಪ... ಸಂದೀಪ...
ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಪ್ರಿನ್ಸ್‌ ಸಾವು ಗೆದ್ದ, ಆದರೆ?
ತೆರೆದ ಕೊಳವೆ ಬಾವಿಯಲ್ಲಿ 7ವರ್ಷದ ಬಾಲಕನ ಒದ್ದಾಟ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X