• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಹೆಚ್‌ಐವಿ : ಬೆಚ್ಚಿ ಬೀಳಿಸುವ ಹೊಸ ಸತ್ಯಗಳು!

By Staff
|


Red Ribbon is the international symbol of HIV and AIDS awarenessನವದೆಹಲಿ : ಭಾರತದಲ್ಲಿನ 5.2 ಮಿಲಿಯನ್‌ ಹೆಚ್‌ಐವಿ ಸೋಂಕಿತರಲ್ಲಿ, ಶೇ. 60ರಷ್ಟು ಜನ ಗ್ರಾಮೀಣ ವಾಸದಲ್ಲಿನ ಮಧ್ಯವಯಸ್ಕರು ಎಂಬ ಅಂಶ ತಿಳಿದು ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನೇಕ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಭಾರತದ ಅನೇಕ ಭಾಗಗಳಲ್ಲಿ ಹೆಚ್‌ಐವಿ ಸೋಂಕು ಹರಡಲು ವೇಶ್ಯಾ ವೃತ್ತಿ ಅಥವಾ ಅಸುರಕ್ಷಿತ ಲೈಂಗಿಕ ಸಂಪರ್ಕಪ್ರಮುಖ ಕಾರಣವಾದರೂ, ಮಾದಕ ವಸ್ತುಗಳುಳ್ಳ ಸೂಜಿಮದ್ದನ್ನು ತೆಗೆದುಕೊಳ್ಳುವುದು ಈಶಾನ್ಯ ಭಾಗದಲ್ಲಿ ಅಧಿಕವಾಗಿದೆ.

ಸೂಜಿಮದ್ದಿನ ಮೂಲಕ ಸೋಂಕು ಹರಡುವಿಕೆ ಈಗ ದೆಹಲಿ, ಮುಂಬಯಿ ಹಾಗೂ ಚೆನ್ನೈನಲ್ಲಿ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿನ ಮುಖ್ಯಾಂಶಗಳು :

  • ಸುಮಾರು ಶೇ. 86ರಷ್ಟು ಜನ ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕ ಸೋಂಕು.
  • ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಮಣಿಪುರ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಹೆಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚು.
  • ಮುಂಬಯಿ ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಹೆಚ್‌ಐವಿ ಸೋಂಕುವುಳ್ಳವರ ಸಂಖ್ಯೆ ಶೇ 40ರಿಂದ 50ರಷ್ಟು ಹೆಚ್ಚಳ.
  • ಕರ್ನಾಟಕದಲ್ಲಿ ಸುಮಾರು 16 ಜಿಲ್ಲೆಗಳನ್ನು ಹೆಚ್‌ಐವಿ ಭಾದಿತ ಪ್ರದೇಶಗಳೆಂದು ಗುರ್ತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗರ್ಭಧಾರಣೆ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹೆಚ್‌ಐವಿ ಸೋಂಕು ಹರಡುತ್ತಿದೆ.
  • ಸಲಿಂಗಕಾಮಿಗಳಿಗೆ ವರದಿಯಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ನೀಡಲಾಗಿದೆ. 18 ಶಂಕಿತ ಪ್ರದೇಶಗಳಲ್ಲಿ ನಡೆಸಲಾದ ಸಮೀಕ್ಷೆಯಂತೆ ಶೇ. 40ರಷ್ಟು ಜನ ಸಲಿಂಗಕಾಮದ ಮೂಲಕ ಸೋಂಕು ಹರಡುವಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ.
  • ಭಾರತದ ಈಶಾನ್ಯ ರಾಜ್ಯಗಳಲ್ಲಿ ಮಾದಕ ವ್ಯಸನಿಗಳಿಂದ ಹೆಚ್‌ಐವಿ ಸೋಂಕು ಹರಡುತ್ತಿದ್ದು, ಆ ಭಾಗದ ಪ್ರಕರಣಗಳಲ್ಲಿ ಮಾದಕ ದ್ರವ್ಯ ಸೇವನೆಯಿಂದ ಶೇ. 70ರಷ್ಟು ಸೋಂಕು ಹರಡುತ್ತಿರುವುದು ಕಂಡು ಬಂದಿದೆ.
(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more