ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ವೈದ್ಯೆಗೆ ಹೈಟೆಕ್‌ ವಂಚನೆ : ಹುಷಾರಾಗಿರಿ!!!

By Staff
|
Google Oneindia Kannada News

ಬೆಂಗಳೂರು : ನಗರದ 24 ವರ್ಷ ವಯಸ್ಸಿನ ವೈದ್ಯೆ ಬಿ.ಎಂ.ದೀಪಾ, ಅನ್‌ಲೈನ್‌ ವಂಚಕರ ಬಲೆಗೆ ಸಿಕ್ಕಿ 5 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಅಮೆರಿಕದಲ್ಲಿ ವೈದ್ಯಕೀಯ ವೃತ್ತಿಯನ್ನು ಪಡೆಯುವ ಉದ್ದೇಶದಿಂದ, ಈ ಆಯುರ್ವೇದ ವೈದ್ಯೆ ಜನವರಿಯಲ್ಲಿ ಚಿರಪರಿಚಿತವಾದ ಜಾಬ್‌ ಸೈಟ್‌ನಲ್ಲಿ ತಮ್ಮ ರೆಸ್ಯೂಮ್‌ ಕಳಿಸಿದ್ದರು. ಅಲ್ಲಿಂದ ವಂಚನೆಯ ಕಥಾನಕ ಪ್ರಾರಂಭವಾಯಿತು.

ಅದರ ಸಾರಾಂಶ ಹೀಗಿದೆ :

ಜನವರಿ 23, 2007 ಡೇವಿಡ್‌ ಕಾಮಾರೂನ್‌ ಎಂಬಾತನಿಂದ ಇ-ಮೇಲ್‌ ಬರುತ್ತದೆ. ‘ಯುನ್‌(ಯುನೈಟೆಡ್‌ ನೇಷನ್‌?)ಗಾಗಿ ಇರುವ ಅಮೆರಿಕ ಸಮಿತಿ’ಯ ನೇಮಕ ಮಂಡಳಿಯ ಅಧಿಕಾರಿ ಎಂಬ ಒಕ್ಕಣೆ ಪತ್ರದಲ್ಲಿರುತ್ತದೆ. ನಿಮ್ಮನ್ನು ಆರೋಗ್ಯ ಅಧಿಕಾರಿಯಾಗಿ ಕತಾರ್‌ನಲ್ಲಿ ಕೆಲಸಕ್ಕೆಂದು ನೇಮಿಸಲಾಗಿದೆ ಎಂದು ನೇಮಕಾತಿಯ ಅರ್ಜಿ ಹಾಗೂ ಸಂದರ್ಶನ ಅರ್ಜಿಯನ್ನು ಕಳಿಸುತ್ತಾನೆ.

ಇದನ್ನು ನಂಬಿದ ದೀಪಾ ಅರ್ಜಿಯನ್ನು ತುಂಬಿ ಕಳಿಸುತ್ತಾಳೆ. ನಂತರ ಪಾಸ್‌ಪೊರ್ಟ್‌ ವಿವರ ಹಾಗೂ ಭಾವಚಿತ್ರಗಳನ್ನು ಕೋರಿ ಪತ್ರ ಬರುತ್ತದೆ. ಅಲ್ಲದೇ ಪ್ಯಾರೀಸ್‌ನಲ್ಲಿರುವ ಬ್ಲೆಸಿಂಗ್‌ ಲಿಬಿ ಎಂಬ ತರಬೇತುದಾರ ವ್ಯವಸ್ಥಾಪಕನೊಡನೆ ವ್ಯವಹರಿಸುವಂತೆ ಕೋರಲಾಗುತ್ತದೆ.

ಜನವರಿ 28,2007:

ದೀಪಾ, ಪ್ಯಾರೀಸ್‌ನ ಲಿಬಿಗೆ ಪತ್ರಿಸುತ್ತಾಳೆ. ಒಂದು ತಿಂಗಳ ತರಬೇತಿಗೆ 1,700 ಡಾಲರ್‌(ಸುಮಾರು 77,639 ರೂ) ನೋಂದಣಿ ಹಣ ಪಾವತಿಸುವಂತೆ ಲಿಬಿ ಹೇಳಿ, ತೈವಾನ್‌ನಲ್ಲಿರುವ ಪ್ರತ್ಯೇಕ ಬ್ಯಾಂಕ್‌ ಖಾತೆ ನಂಬರ್‌ ಕಳಿಸುತ್ತಾನೆ. ಟೆಲಿಗ್ರಾಫಿಕ್‌ ವರ್ಗಾವಣೆ ಮೂಲಕ ದೀಪಾ ಹಣವನ್ನು ರವಾನಿಸುತ್ತಾಳೆ.

ಫೆಬ್ರವರಿ 12, 2007:

ಪ್ಯಾರೀಸ್‌ನಲ್ಲಿ ವಾಸ್ತವ್ಯದ ಖರ್ಚಿಗಾಗಿ ಸುಮಾರು 2,796 ಡಾಲರ್‌(1,25,198 ರೂ) ಕಳಿಸುವಂತೆ ಲಿಬಿ ಕೋರುತ್ತಾನೆ.

ಫೆಬ್ರವರಿ 18, 2007:

ಆಲ್ಬರ್ಟ್‌ ಅರ್ಕಾನ್ಸಸ್‌ ಎಂಬಾತ ವೀಸಾ ಪ್ರಕ್ರಿಯೆ ಹಾಗೂ ವಿಮಾನ ದರ ಮತ್ತಿತ್ತರ ಖರ್ಚಿಗಾಗಿ ಎಂದು 3,550 ಡಾಲರ್‌ (1,60,274ರೂ) ನೀಡುವಂತೆ ಇ-ಮೇಲ್‌ ಮಾಡುತ್ತಾನೆ. ಇದೇ ರೀತಿ ಒಟ್ಟು 4,69,746 ರೂ.(ಸುಮಾರು 10,476ಡಾಲರ್‌) ಹಣವನ್ನು ವಂಚಕರ ಕೈಗಿತ್ತು , ವೀಸಾಗಾಗಿ ಕಾದು ಕೂತ ದೀಪಾಳಿಗೆ ತಡವಾಗಿಯಾದರೂ ಸತ್ಯದ ಅರಿವಾಗಿದೆ.

ವೀಸಾ ನೀಡಿಕೆ ಹಾಗೂ ಟಿಕೆಟ್‌ ಬಗ್ಗೆ ಯುಎನ್‌ ಅಧಿಕಾರಿಗಳೆಂಬ ಹೆಸರಿನ ವಂಚಕರು ವಿಳಂಬ ಮಾಡಿದಾಗಲೇ ದೀಪಾಳಿಗೆ ತಾನು ಮೋಸ ಹೋಗಿರುವ ವಿಚಾರ ಸ್ಪಷ್ಟವಾಗಿದೆ. ಆದರೆ ಕಾಲ ಮೀರಿದೆ.

ಕಡೆಗೆ ದೀಪಾ, ನ್ಯಾಯಕ್ಕಾಗಿ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಅಲ್ಲಿಂದ ಕೇಸ್‌ ಸೈಬರ್‌ ಠಾಣೆಗೆ ರವಾನೆಯಾಗಿದೆ. ನ್ಯಾಯದ ನಿರೀಕ್ಷೆಯಲ್ಲಿ ದೀಪಾ ಕಾದಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X