ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗದಲ್ಲಿ ನಂದಿನಿ ಹಾಲಿನ ದರ ಜಾಸ್ತಿಯಾದದ್ದೇಕೆ?

By Staff
|
Google Oneindia Kannada News

ಗುಲ್ಬರ್ಗ : ಕರ್ನಾಟಕ ಹಾಲು ಒಕ್ಕೂಟದ ಗುಲ್ಬರ್ಗ ವಿಭಾಗದಲ್ಲಿ , ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ ಎಂದು ಗುಲ್ಬರ್ಗ ನಂದಿನಿ ಹಾಲಿನ ಘಟಕದ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ. ಗೋಪಾಲ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡರು. ನಂದಿನಿ ಟೋನ್ಡ್‌ ಹಾಗೂ ಅನ್‌ಟೋನ್ಡ್‌ ಹಾಲಿನ ದರದಲ್ಲಿ 1ರೂ ಹೆಚ್ಚಳ ಆಗಿದೆ ಎಂದು ಹೇಳಿದರು.

ಗುಲ್ಬರ್ಗ ಹಾಗೂ ಬೀದರ್‌ ಜಿಲ್ಲೆಗಳಿಗೆ ಒಟ್ಟು 48,000 ಲೀಟರ್‌ ಹಾಲಿನ ಅವಶ್ಯಕತೆ ಇದೆ. ಆದರೆ ಕೇವಲ 20, 000 ಲೀಟರ್‌ ಹಾಲು ಶೇಖರಣೆ ಆಗುತ್ತಿದೆ. ಈ ವ್ಯತ್ಯಯವನ್ನು ಸರಿದೂಗಿಸಲು ಕೋಲಾರ ಹಾಗೂ ಶಿವಮೊಗ್ಗ ಘಟಕಗಳಿಂದ ಹಾಲನ್ನು ತರಿಸಿಕೊಳ್ಳಲಾಗುತ್ತಿದೆ. ಇದರಿಂದ ಘಟಕಕ್ಕೆ ಪ್ರತಿ ಲೀಟರ್‌ಗೆ 2.50 ರೂ ನಷ್ಟ ವಾಗುತ್ತಿದೆ ಎಂದು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X