ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೆ ಉಚಿತ ಬ್ರಾಡ್‌ಬ್ಯಾಂಡ್‌ ಸಂಪರ್ಕ : ಹೌದಾ?

By Staff
|
Google Oneindia Kannada News

ನವದೆಹಲಿ : ಒನ್‌ ಇಂಡಿಯಾ ಯೋಜನೆ ಮೂಲಕ, ಸ್ಥಳೀಯ ಹಾಗೂ ದೇಶಿಯ ದೂರವಾಣಿ ಕರೆಗಳ ದರವನ್ನು ಕೇವಲ 1 ರೂ.ಗಳಿಗೆ ಇಳಿಸಿ ಅಚ್ಚರಿ ಮೂಡಿಸಲಾಗಿತ್ತು. ಈಗ ಉಚಿತ ಬ್ರಾಡ್‌ ಬ್ಯಾಂಡ್‌ನ ಪರ್ವ!

ಬಿಎಸ್‌ಎನ್ನೆಲ್‌ ಹಾಗೂ ಎಂಟಿಎನ್‌ಎಲ್‌ ಸಂಸ್ಥೆ ಇಂಟರ್‌ನೆಟ್‌ ಸೇವೆ ನೀಡಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿವೆ. ಇದನ್ನು ಮನಗಂಡ ಸಚಿವ ದಯಾನಿಧಿ ಮಾರನ್‌, ಕೆಲ ಪರಿಹಾರವನ್ನು ಹುಡುಕಿದ್ದಾರೆ. ಅನೇಕ ಮೊಬೈಲ್‌ ಸಂಪರ್ಕ ಇರುವವರಿಗೆ ಸ್ಥಿರ ದೂರವಾಣಿ ಸಂಪರ್ಕ ಉಚಿತವಾಗಿ ನೀಡಿಕೆ. ಉಚಿತ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ಸೇವೆ ಇವುಗಳಲ್ಲಿ ಪ್ರಮುಖವಾದವುಗಳು.

ಉಚಿತ ಬ್ರಾಡ್‌ ಬ್ಯಾಂಡ್‌ ಸೇವೆ ಹೇಗೆ ಸಾಧ್ಯ?

ರಾಜ್ಯಗಳ ಸ್ವಾಮ್ಯದಲ್ಲಿರುವ ಭಾರತ್‌ ಸಂಚಾರ ನಿಗಮ ನಿಯಮಿತ(ಬಿಎಸ್‌ಎನ್‌ಎಲ್‌) ಹಾಗೂ ಮಹಾನಗರ ಟೆಲಿಫೋನ್‌ ನಿಗಮ ನಿಯಮಿತ(ಎಂಟಿಎನ್‌ಎಲ್‌) ಸಂಸ್ಥೆಗಳು ಸೇರಿ ವೆಬ್‌ ಹೋಸ್ಟಿಂಗ್‌ ಪ್ರಾರಂಭಿಸುವುದು. ದೇಶದಲ್ಲಿ ಈಗ ಇಂಟರ್‌ನೆಟ್‌ ಬಳಕೆಯಿಂದ ಉಂಟಾಗುತ್ತಿರುವ ಟ್ರಾಫಿಕ್‌ ಅನ್ನು ಸರಿಯಾಗಿ ಬಳಕೆ ಮಾಡಿಕೊಂಡು, ಎಲ್ಲೆಡೆ ಸರ್ವರ್‌ಗಳನ್ನು ಅಳವಡಿಸಿ, ಭಾರತದಲ್ಲೇ ಇಂಟರ್‌ನೆಟ್‌ ಟ್ರಾಫಿಕ್‌ ಉಳಿಯುವಂತೆ ನೋಡಿಕೊಳ್ಳುವುದು ಒಂದು ಯೋಜನೆ.

ದರದಲ್ಲಿ ಇಳಿಕೆ ಸಾಧ್ಯತೆ :

ಬಿಎಸ್‌ಎನ್ನೆಲ್‌ನಿಂದ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪಡೆದವರ ಸಂಖ್ಯೆ ಸುಮಾರು 8ರಿಂದ 9 ಲಕ್ಷದಷ್ಟಿದೆ. ಸುಮಾರು 2 ಎಂಬಿಪಿಎಸ್‌ ವೇಗದಲ್ಲಿ ನಿರ್ವಹಿಸುವ ಬ್ರಾಂಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಗೆ , ಮಾಸಿಕವಾಗಿ 250 ರೂ. ತಗಲುತ್ತದೆ. ಆದರೆ ಡೌನ್‌ಲೋಡ್‌ ಹಾಗೂ ಅಪ್‌ಲೋಡ್‌ ನಿಗದಿ ಪ್ರಮಾಣ 1 ಜೀಬಿ (1024 ಮೆಗಾ ಬೈಟ್ಸ್‌) ಮಾತ್ರ ನೀಡಿದೆ.

ಎಂಟಿಎನ್‌ಎಲ್‌ ಇದೇ ಪ್ಲಾನ್‌ಗೆ 199 ರೂ ವಿಧಿಸಿದೆ. ಅಂದರೆ ಇಂಟರ್‌ನೆಟ್‌ನಿಂದ ಏನಾದರೂ ನಿಮ್ಮ ಗಣಕಕ್ಕೆ ಇಳಿಸಬೇಕು ಅಥವಾ ಏನಾದರೂ ಬೇರೆಯವರಿಗೆ ಕಳಿಸುವ ಮೊದಲು ನಿಗದಿ ಪ್ರಮಾಣವನ್ನು ನೋಡುತ್ತಿರಬೇಕು. 1 ಜೀಬಿ ದಾಟಿದರೆ. ಪ್ರತಿ ಎಂಬಿ (1000 ಕಿಲೋ ಬೈಟ್ಸ್‌) ಗೆ ಸುಮಾರು 1 ರಿಂದ 2 ರೂ ಹೆಚ್ಚಿನ ದರ ಕೊಡಬೇಕಾಗುತ್ತದೆ.

ಅನ್‌ ಲಿಮಿಟೆಡ್‌ ಎನ್ನುವ ಲಿಮಿಟೆಡ್‌ ಪ್ಲಾನ್‌ :

ಬಿಎಸ್‌ಎನ್‌ಎಲ್‌ ನೀಡುವ ಅನ್‌ ಲಿಮಿಟೆಡ್‌ ಪ್ಲಾನ್‌ ಮೂಲಕ ಇಂಟರ್‌ನೆಟ್‌ ಮೂಲಕ ಡೌನ್‌ಲೋಡ್‌ ಮಾಡಲು ಯಾವುದೇ ನಿಗದಿತ ಪ್ರಮಾಣ ಇರುವುದಿಲ್ಲ. ಎಷ್ಟು ಬೇಕಾದರೂ ಡೌನ್‌ ಲೋಡ್‌ ಮಾಡಬಹುದು. ಆದರೆ ತಿಂಗಳಿಗೆ 900ಕ್ಕೂ ಅಧಿಕ ದುಡ್ಡು ನೀಡಬೇಕು. ಖಾಸಗಿ ವಲಯದ ಸಿಫಿ, ಏರ್‌ಟೆಲ್‌ ಮುಂತಾದವುಗಳ ಅನ್‌ ಲಿಮಿಟೆಡ್‌ ದರ 600 ರೂ ದಾಟುವುದಿಲ್ಲ.

ಇದಲ್ಲದೆ ಸ್ಥಿರ ದೂರವಾಣಿಯನ್ನು ಹಿಂದಿರುಗಿಸುವವರ ಸಂಖ್ಯೆ ಕೂಡ ವಾರ್ಷಿಕವಾಗಿ 15-20 ಲಕ್ಷದಷ್ಟಾಗಿರುವುದರಿಂದ, 3-4 ಬಿಎಸ್‌ಎನ್‌ಎಲ್‌ ಮೊಬೈಲ್‌ ಸಂಪರ್ಕ ಹೊಂದಿರುವವರಿಗೆ ಉಚಿತ ಸ್ಥಿರ ದೂರವಾಣಿ ಸಂಪರ್ಕ ನೀಡುವ ಬಗ್ಗೆ ಕೂಡ ಚಿಂತನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಸಚಿವ ಮಾರನ್‌.

ಈ ಯೋಜನೆಗಳು ಆಶಾದಾಯಕವಾಗಿದ್ದರೂ ಸರಿಯಾಗಿ ಜಾರಿಯಾಗಿ ಎಲ್ಲರನ್ನೂ ತಲುಪಲು ಇನ್ನೆರಡು ವರ್ಷವಾದರೂ ಕಾಯಬೇಕಾಗಬಹುದು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X