• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ. 28 : ಆಸ್ಟ್ರೇಲಿಯಾ---ಶ್ರೀಲಂಕಾ ನಡುವೆ ಫೈನಲ್‌ ಪಂದ್ಯಹರಿಣಗಳಿಗೆ ಮುಖಭಂಗ : ಕಾಂಗೂರುಗಳು ಫೈನಲ್‌ಗೆ

By Staff
|

Proteas all out cheaply to Aussies in World Cup Semifinalಸೈಂಟ್‌ ಲೂಸಿಯಾ : ವಿಶ್ವಕಪ್‌ ಕ್ರಿಕೆಟ್‌ 2ನೇ ಉಪಾಂತ್ಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ, 7ವಿಕೆಟ್‌ಗಳ ಜಯ ದಾಖಲಿಸಿ ಆಸ್ಟ್ರೇಲಿಯಾ, ನಾಲ್ಕನೆ ಬಾರಿ ಫೈನಲ್‌ ಪ್ರವೇಶಿಸಿದೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್‌ ಗೆದ್ದು , ಮೊದಲು ಬ್ಯಾಟಿಂಗ್‌ ಮಾಡಲು ಇಳಿಯಿತು. ಆದರೆ ಆಸೀಸ್‌ನ ವೇಗದ ಬೌಲರ್‌ಗಳಾದ ಗ್ಲೆನ್‌ ಮೆಗ್ರಾಥ್‌, ಶಾನ್‌ ಟೈಟ್‌ ಆವರ ವೇಗದ ದಾಳಿಗೆ ಸಿಕ್ಕಿ, ದಕ್ಷಿಣ ಆಫ್ರಿಕಾ ನುಜ್ಜುಗುಜ್ಜಾಯಿತು. ದಕ್ಷಿಣ ಆಫ್ರಿಕಾ ತಂಡ ಆ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ತನ್ನ ಅತಿ ಕಡಿಮೆ ಮೊತ್ತ ಗಳಿಸಿತು. ಕೇವಲ 149 ರನ್‌ಗಳಿಗೆ ಆಲೌಟ್‌ ಆಯಿತು.

ದಕ್ಷಿಣ ಆಫ್ರಿಕಾ ಪರ ಗಿಬ್ಸ್‌ 39 ರನ್‌ ಹಾಗೂ ಕೆಂಪ್‌ ಅಜೇಯ 49 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಆಸೀಸ್‌ ಪರ ಮೆಗ್ರಾಥ್‌ 18 ರನ್ನಿತ್ತು 3 ವಿಕೆಟ್‌ ಪಡೆದರೆ, ಶಾನ್‌ ಟೈಟ್‌ 39 ರನ್ನಿತ್ತು 4 ವಿಕೆಟ್‌ ಗಳಿಸಿ ಆಸೀಸ್‌ಗೆ ಫೈನಲ್‌ ಹಾದಿ ಸುಗಮಗೊಳಿಸಿದರು.

ಗೆಲುವಿನ ಗುರಿಯನ್ನು ಬೆನ್ನತ್ತಿದ ಕಾಂಗೂರು ಪಡೆ 3 ವಿಕೆಟ್‌ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಆಸೀಸ್‌ ಪರ ಹೇಡನ್‌ 41 ರನ್‌( ವಿಶ್ವಕಪ್‌ ಟೂರ್ನಿಯಲ್ಲಿ 600 ರನ್‌ ಗಳಿಕೆಯ ಸಾಧನೆ) ಹಾಗೂ ಮೈಕಲ್‌ ಕ್ಲಾರ್ಕ್‌ ಅಜೇಯ 60 ರನ್‌ ಗಳಿಸಿ ಜಯ ತಂದಿತ್ತರು.

1996 ವಿಶ್ವಕಪ್‌ ಫೈನಲ್ಸ್‌ ಪುನರಾವರ್ತನೆ :

ಏಪ್ರಿಲ್‌28ರ ಶನಿವಾರ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವೆ ಫೈನಲ್‌ ಪಂದ್ಯ ನಡೆಯಲಿದೆ. ಇದು 1996ರ ವಿಶ್ವಕಪ್‌ ಫೈನಲ್ಸ್‌ನ್ನು ನೆನಪಿಸುತ್ತದೆ.

1996ರಲ್ಲಿ ಲಾಹೋರ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲ ಬಾರಿಗೆ ಅರ್ಜುನ ರಣತುಂಗಾ ನೇತೃತ್ವದ ಶ್ರೀಲಂಕಾ ಪಡೆ, ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವಕಪ್‌ನ್ನು ತಮ್ಮದಾಗಿಸಿಕೊಂಡಿತ್ತು. ಒಟ್ಟಿನಲ್ಲಿ ಈ ಬಾರಿಯ ಫೈನಲ್‌ ಪಂದ್ಯ, ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ನೀಡುವ ಎಲ್ಲಾ ಸಾಧ್ಯತೆಯಿದೆ. ಆಸೀಸ್‌ನ ಗೆಲುವಿನ ಓಟಕ್ಕೆ ಲಂಕನ್ನರು ಕಡಿವಾಣ ಹಾಕಬಲ್ಲರೆ? ಎಂಬುದು ಎಲ್ಲರ ಪ್ರಶ್ನೆ.

(ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more