ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ ಫಲಿತಾಂಶ : ಚಿಕ್ಕೋಡಿ ಫಸ್ಟ್‌, ಉಡುಪಿ ಸೆಕೆಂಡ್‌

By Staff
|
Google Oneindia Kannada News

ಬೆಂಗಳೂರು : ಕಳೆದ ಹತ್ತುವರ್ಷಗಳಲ್ಲಿ ಈ ವರ್ಷ, ಅತಿಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿಸಲದಂತೆಯೇ ಬಾಲಕಿಯರದೇ ಈ ಸಲವೂ ಮೇಲುಗೈ.

ಮಾರ್ಚ್‌ ತಿಂಗಳಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. 8,07,939 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶಾಲಾ ಕಾಲೇಜು ಮತ್ತು ಇಂಟರ್‌ನೆಟ್‌ನಲ್ಲಿ ಫಲಿತಾಂಶ ನೋಡಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದ ದೃಶ್ಯ ಇಂದು ರಾಜ್ಯದೆಲ್ಲೆಡೆ ಸಾಮಾನ್ಯವಾಗಿತ್ತು.

ಫಲಿತಾಂಶದ ವಿವರ -

  • ಶೇ.76.32ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.
  • ಫಲಿತಾಂಶದಲ್ಲಿ ಚಿಕ್ಕೋಡಿಗೆ ಮೊದಲ ಸ್ಥಾನ(ಶೇ.81.97)
  • ಉಡುಪಿಗೆ ಎರಡನೇ ಸ್ಥಾನ(ಶೇ.76.63)
  • ಗದಗಕ್ಕೆ ಮೂರನೇ ಸ್ಥಾನ(ಶೇ.72.20)
  • ಬೀದರ್‌ಗೆ ಕಡೆಯ ಸ್ಥಾನ
  • ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣಿಗ ವಿದ್ಯಾರ್ಥಿಗಳನ್ನು ಫಲಿತಾಂಶದಲ್ಲಿ ಹಿಂದಕ್ಕೆ ಹಾಕಿದ್ದಾರೆ(ಗ್ರಾಮೀಣ ವಿದ್ಯಾರ್ಥಿಗಳು-ಶೇ.76.27, ಪಟ್ಟಣದ ವಿದ್ಯಾರ್ಥಿಗಳು -ಶೇ.73.09).
  • ರಾಜ್ಯದ 36ಶಾಲೆಗಳಲ್ಲಿ ಶೂನ್ಯ ಫಲಿತಾಂಶ!
  • ವಿದ್ಯಾರ್ಥಿಗಳ ಗಮನಕ್ಕೆ - ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ -ಮೇ.2.2007. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ.28ರಂದು ಮರುಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಶುಲ್ಕ ಪಾವತಿಸಲು ಕಡೆಯ ದಿನಾಂಕ -ಮೇ.4.2007
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X