ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ ಪರಾಭವ : ಫೈನಲ್‌ಗೆ ನೆಗೆದ ಶ್ರೀಲಂಕಾ

By Staff
|
Google Oneindia Kannada News

Jayawardene leads Sri Lanka into finalಜಮೈಕಾ : ನ್ಯೂಜಿಲೆಂಡ್‌ ತಂಡವನ್ನು 81ರನ್‌ಗಳಿಂದ ಸೋಲಿಸುವ ಮೂಲಕ ಶ್ರೀಲಂಕಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ತಲುಪಿದೆ.

ಮಂಗಳವಾರ ರಾತ್ರಿ(ಏಪ್ರಿಲ್‌ 24) ನಡೆದ ಮೊದಲ ಸೆಮಿಫೈನಲ್‌ನಲ್ಲಿ, ಮೊದಲು ಬ್ಯಾಟಿಂಗಿಗಿಳಿದ ಶ್ರೀಲಂಕಾ ನಿಗದಿತ 50ಓವರುಗಳಲ್ಲಿ 5ವಿಕೆಟ್‌ ಕಳೆದುಕೊಂಡು 289ರನ್‌ ಗಳಿಸಿತು. ನಾಯಕ ಮಹೇಲ ಜಯವರ್ಧನೆ 115ರನ್‌ ಗಳಿಸಿ ಅಜೇಯವಾಗಿ ಉಳಿದರು. ಉಪುಲ್‌ ತರಂಗ ಅರ್ಧ ಶತಕ ಗಳಿಸಿದರು. ನ್ಯೂಜಿಲೆಂಡ್‌ ಪರ ಜೇಮ್ಸ್‌ ಫ್ರ್ಯಾಂಕ್ಲಿನ್‌ 46ರನ್‌ ನೀಡಿ 2 ವಿಕೆಟ್‌ ಪಡೆದರು.

ಗೆಲುವಿನ ಗುರಿ ಬೆನ್ನು ಹತ್ತಿದ ನ್ಯೂಜಿಲೆಂಡ್‌ ಯಾವುದೇ ಹಂತದಲ್ಲೂ ಪ್ರಬಲ ಹೋರಾಟ ನೀಡಲಿಲ್ಲ. ಒಂದರ ಹಿಂದೆ ಒಂದರಂತೆ ವಿಕೆಟ್‌ಗಳು ಪತನವಾಗುತ್ತಲೇ ಹೋದವು. ತಂಡ ಅಂತಿಮವಾಗಿ 41.4 ಓವರುಗಳಲ್ಲಿ 208ರನ್‌ಗಳಿಗೆ ಸರ್ವಪತನ ಕಂಡಿತು.

ಪೀಟರ್‌ ಫುಲ್ಟನ್‌, ಸ್ಕಾಟ್‌ ಸ್ಟೈರಿಸ್‌ ಅನುಕ್ರಮವಾಗಿ 46, 37ರನ್‌ ಗಳಿಸಿದರು. ಶ್ರೀಲಂಕಾ ಪರ ಮುತ್ತಯ್ಯ ಮುರಳೀಧರನ್‌ 31ರನ್‌ ನೀಡಿ 4ವಿಕೆಟ್‌ಗಳನ್ನು ಕಬಳಿಸಿದರು. ಸನತ್‌ ಜಯಸೂರ್ಯ, ತಿಲಕರತ್ನೆ ದಿಲ್‌ಶಾನ್‌ ತಲಾ ಎರಡು ವಿಕೆಟ್‌ ಉರುಳಿಸಿದರು.

ಶ್ರೀಲಂಕಾ ಚಾಂಪಿಯನ್‌ ಆಗುವುದೇ...? : ಶ್ರೀಲಂಕಾ ಈ ಗೆಲುವಿನ ಮೂಲಕ ಎರಡನೇ ಬಾರಿಗೆ ವಿಶ್ವಕಪ್‌ನ ಫೈನಲ್‌ಗೆ ಕಾಲಿಟ್ಟಂತಾಗಿದೆ. ಈ ಮೊದಲು 1996ರ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದ ಶ್ರೀಲಂಕಾ, ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

ಪ್ರಸ್ತುತ ಪಂದ್ಯಾವಳಿಯ ಆರಂಭಕ್ಕೂ ಮೊದಲು ಶ್ರೀಲಂಕಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿರಲಿಲ್ಲ. ಆದರೆ ಲೆಕ್ಕಾಚಾರಗಳೆಲ್ಲವೂ ಬುಡಮೇಲಾಗಿರುವ ಹಿನ್ನೆಲೆಯಲ್ಲಿ, ಈ ಬಾರಿಯೂ ವಿಶ್ವಕಪ್‌ ಮುಡಿಗೇರಿಸಿಕೊಳ್ಳಲು ಶ್ರೀಲಂಕಾ ಮುಂದೆ ಬಂದು ನಿಂತಿದೆ.

ಇಂದು ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಹಣಾಹಣಿ : ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಕ್ಕಾ ವೃತ್ತಿಪರ ತಂಡಗಳಾದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಎದುರಾಗುತ್ತಿರುವುದು ಇದು ಎರಡನೇ ಬಾರಿ. 1999ರ ವಿಶ್ವಕಪ್‌ನಲ್ಲಿ ಎರಡೂ ತಂಡಗಳ ನಡುವೆ ನಡೆದ ಪಂದ್ಯ ‘ಟೈ’ನಲ್ಲಿ ಅಂತ್ಯಗೊಂಡಿತ್ತು. ಆದರೆ ರನ್‌ರೇಟ್‌ ಲೆಕ್ಕಾಚಾರದಿಂದ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶ ಪಡೆದಿತ್ತು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X