ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಾಲಿ ಮೇಲೆ ಅರಮನೆ’ ರೈಲು : ಪ್ರತಿ ಸೀಟಿಗೆ 85ಸಾವಿರ!

By Staff
|
Google Oneindia Kannada News

ಬೆಂಗಳೂರು : ಕಡೆಗೂ ಗಾಲಿಗಳ ಮೇಲೆ ಅರಮನೆ ರೈಲು, ಬೆಂಗಳೂರು ಮೂಲಕ ಚಲಿಸಲು ಸಿದ್ಧವಾಗಿದೆ. ಅದರ ಜೊತೆಗೆ ಪ್ರಯಾಣ ದರ ಕೂಡ ಹೆದರುವಂತಿದೆ!

ಹೌದು. ಈ ಪ್ರವಾಸ ವೈಭೋಗ, ಶ್ರೀಮಂತರಿಗೆ ಮಾತ್ರ! ಏಳು ಹಗಲು ಹಾಗೂ ಆರು ರಾತ್ರಿಗಳ ಪ್ರವಾಸಕ್ಕೆ, ಜೇಬಲ್ಲಿ 85ಸಾವಿರ ಹಣವಿರಬೇಕು!

ನವೆಂಬರ್‌ನಿಂದ ಗಾಲಿಗಳ ಮೇಲೆ ಅರಮನೆ ರೈಲು ಓಡಾಡುವ ಸಾಧ್ಯತೆಗಳಿವೆ. ದಿನವೊಂದಕ್ಕೆ ಪ್ರಯಾಣದರ 14,500 ರೂಗಳಾಗುತ್ತದೆ. ಡಾಲರ್‌ನಲ್ಲಿ ಪ್ರಯಾಣದ ಹಣ ನೀಡುತ್ತೇವೆ ಎಂದರೆ ದಿನಕ್ಕೆ 350 ಅಮೆರಿಕನ್‌ ಡಾಲರ್‌ ನೀಡಿದರೆ ಸಾಕು. ಸುಮಾರು 7 ದಿನದ ಪ್ರಯಾಣದಲ್ಲಿ ಬೆಂಗಳೂರು, ಮೈಸೂರು, ಹೊಸಪೇಟೆ, ಹಂಪೆ, ಲೋಂಡ ಮಾರ್ಗವಾಗಿ ಗೋವಾ ತಲುಪಬಹುದು.

ಪ್ರವಾಸದ ಪ್ಯಾಕೇಜಿನಲ್ಲಿ ಪ್ರಯಾಣ ದರವನ್ನು ಮಾತ್ರ ಪ್ರಯಾಣಿಕರು ನೀಡಿದರೆ ಸಾಕು, ಬೇರೇನೂ ಖರ್ಚು ಮಾಡುವ ಅಗತ್ಯವಿಲ್ಲ. ಅಗತ್ಯವಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್‌. ಎಸ್‌. ಮಹದೇವ ಪ್ರಸಾದ್‌ ಸುದ್ದಿಗಾರರಿಗೆ ಹೇಳಿದ್ದಾರೆ.

ಸುಮಾರು 38 ಕೋಟಿ ವೆಚ್ಚದ ಗಾಲಿಗಳ ಮೇಲೆ ಅರಮನೆ ರೈಲಿಗೆ ಬೇಕಾದ ಆರ್ಥಿಕ ಪೂರೈಕೆಯನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮನಾಗಿ ನೀಡುತ್ತಿವೆ. ಗಾಲಿಗಳ ಮೇಲೆ ಅರಮನೆ ಎಂಬ ಐಷಾರಮಿ ರೈಲಿಗೆ ಕನ್ನಡತನದ ಹೆಸರು ಇಡುವ ಪ್ರಯತ್ನ ನಡೆದಿದೆ ಎಂದು ಮಹದೇವ ಪ್ರಸಾದ್‌ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X