• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

34ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್‌ ಬ್ಲಾಸ್ಟರ್‌ ತೆಂಡೂಲ್ಕರ್‌

By Staff
|


ನವದೆಹಲಿ : ಲಿಟ್ಲ್‌ ಮಾಸ್ಟರ್‌-ಮಾಸ್ಟರ್‌ ಬ್ಲಾಸ್ಟರ್‌ ಎಂಬ ಖ್ಯಾತಿಪಡೆದಿರುವ ಕ್ರಿಕೆಟ್‌ ದಂತಕತೆ, ಸಚಿನ್‌ ತೆಂಡೂಲ್ಕರ್‌ ಮಂಗಳವಾರ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸಾಮಾನ್ಯವಾಗಿ ಸಚಿನ್‌ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದು ವಾಡಿಕೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಯಾವಾಗಲೂ ಕ್ರಿಕೆಟ್‌ ನಿಮಿತ್ತ ಪ್ರವಾಸದಲ್ಲಿರುತ್ತಿದ್ದುದರಿಂದ ಸರಳವಾಗೇ ನಡೆದುಹೋಗುತ್ತಿತ್ತು. ಬಾಂಗ್ಲಾದೇಶ ಪ್ರವಾಸಕ್ಕೆ ಅವರನ್ನು ಆಯ್ಕೆಮಾಡದೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ, ಹೆಂಡತಿ, ಮಕ್ಕಳು, ಸ್ನೇಹಿತರು ಹಾಗೂ ಪರಿವಾರದ ಎಲ್ಲ ಸದಸ್ಯರೊಂದಿಗೆ ಸಂತಸದಿಂದ ಹುಟ್ಟುಹಬ್ಬ ಆಚರಿಸಿಕೊಂಡರು.

ವೃತ್ತಿಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ಸಚಿನ್‌, ಕ್ರಿಕೆಟ್‌ನಲ್ಲಿ ಪಕ್ವ ಪ್ರತಿಭೆ. ಟೀಕೆ-ಹೊಗಳಿಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾ, ತನ್ನ ಪಾಡಿಗೆ ತಾನು ಕ್ರಿಕೆಟ್‌ ನಿಷ್ಠೆಯನ್ನು ಮೆರೆದಿರುವ ಸಭ್ಯ ಆಟಗಾರ. ಜಗತ್ತಿನ ಕ್ರಿಕೆಟ್‌ ಪ್ರೇಮಿಗಳ ಆರಾಧ್ಯದೈವ.

ಜಗತ್ತಿನ ಮೂಲೆಮೂಲೆಗಳಿಂದ ಸಚಿನ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more