ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಜ-ಗಣಿತ : ಮೇ.7ರಿಂದ ಆನೆ ಎಣಿಸೋಣ ಬಾರೋ...

By Staff
|
Google Oneindia Kannada News

Elephant census begins on May 7 in southern statesತಿರುವನಂತಪುರ : 2005ರ ಗಣತಿಯಂತೆ ಕರ್ನಾಟಕದಲ್ಲಿ ಸುಮಾರು 4,500 ಆನೆಗಳಿವೆ. ತಮಿಳುನಾಡಿನಲ್ಲಿ 4,000 ಹಾಗೂ ಕೇರಳದಲ್ಲಿ 3,500 ಆನೆಗಳಿವೆ. ಇವೂ ಸೇರಿ, ದೇಶದಲ್ಲಿ ಒಟ್ಟು 21,300 ಆನೆಗಳಿವೆ ಎನ್ನುವುದು ಹಳೆಯ ಲೆಕ್ಕ.

2007ರಲ್ಲಿ ಆನೆಗಳ ಸಂತತಿ ಹೆಚ್ಚಿದೆಯೇ? ಕಡಿಮೆಯಾಗಿದೆಯೇ? -ಈ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಕೆಲಸ ಆರಂಭಗೊಳ್ಳಲಿದೆ. ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿರುವ ಆನೆಗಳ ಗಣತಿ ಕಾರ್ಯ, ಮೇ 7ರಂದು ಆರಂಭವಾಗಿ 9ರಂದು ಮುಗಿಯಲಿದೆ.

ಪೂರ್ವ ಹಾಗೂ ಪಶ್ಚಿಮ ಘಟ್ಟದ ದಟ್ಟ ಅರಣ್ಯಗಳಲ್ಲಿ ನೂರಾರು ಜನ ಅರಣ್ಯ ಸಿಬ್ಬಂದಿಗಳು, ಸ್ವಯಂ ಸೇವಕರು, ಪರಿಸರ ಪ್ರೇಮಿಗಳು ಮೂರು ದಿನಗಳ ಈ ಸಂಯೋಜಿತ ಗಣತಿ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿದ್ದಾರೆ.

ಕೇರಳ ಅರಣ್ಯ ಸಂಶೋಧನಾ ಕೇಂದ್ರ ಹಾಗೂ ಪೆರಿಯಾರ್‌ ಫೌಂಡೇಶನ್‌ನ ಸಹಕಾರದಿಂದ ಆನೆಗಳ ಗಣತಿ ಕಾರ್ಯ ನಡೆಯಲಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X