• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಗೋ ಸಮ್ಮೇಳನ : ದಿನ-4ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮಗಳ ಕಣ್ಣಲ್ಲಿ ಗೋಮಾತೆ!

By Staff
|


ಗೋ ಹತ್ಯೆ ನಿಜಕ್ಕೂ ದೇಶ ದ್ರೋಹ..

ಅಶೋಕ ಸ್ಥಂಬ ದೇಶದ ಗೌರವದ ಸಂಕೇತ ಅದರಲ್ಲಿರುವ ನಂದಿಯೂ ರಾಷ್ಟ್ರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಯಾರು ಗೋ ಹತ್ಯೆ ಮಾಡುತ್ತಾರೊ ಅವರು ರಾಷ್ಟ್ರ ಸ್ತಂಬಕ್ಕೆ ತನ್ಮೂಲಕ ರಾಷ್ಟ್ರಕ್ಕೆ ಅಪಮಾನ ಮಾಡಿದಂತೆ ಅಂತವರನ್ನು ರಾಷ್ಟ್ರ ದ್ರೋಹದ ಮೇಲೆ ಶಿಕ್ಷೆ ನೀಡುವಂತಾಗಬೇಕೆಂದು ಆವೇಶದಲ್ಲಿ ಮಾತನಾಡಿದವರು ನವ ದೆಹಲಿಯ ಶ್ರೀ ಮಹಾಶಕ್ತಿಪೀಠಂದ ಆಚಾರ್ಯ ಮಹಾಮಂಡಲೇಶ್ವರ ಶ್ರೀಶ್ರೀಸರ್ವಾನಂದ ಸರಸ್ವತಿ ಸ್ವಾಮೀಜಿ.

ವಿಶ್ವ ಗೋ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಸಂತ ಸಮಾವೇಶದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.

ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ತಿಳಿಸಿ ಗೋ ಸಂರಕ್ಷಣೆ ದೇಶ ಸಂರಕ್ಷಣೆಯಷ್ಟೇ ಪ್ರಮುಖವಾಗಿರುವುದು ಎಂದರು.

ಬಿಹಾರದ ಸಂಕಲ್ಪಾ ಆಶ್ರಮದ ಭಾಸ್ಕರ ಚೇತನ ಸ್ವಾಮೀಜಿ, ಅಥಣಿಯ ಅಭಯಾನಂದ ಸ್ವಾಮೀಜಿ, ಮಥುರ ಬೃಂದಾವನಿಯ ಮೋಹನದಾಸ್‌ ಮಹಾರಾಜ್‌, ಪಾಟ್ನದ ಜನಾರ್ಧನದೇವ, ಗುಜರಾತ್‌ ಅಹಮದ್‌ಬಾದ್‌ನ ಜಗನ್ಮಾತ ಮಂದಿರದ ಗಂಗಾರಾಮ್‌ದಾಸ್‌, ಅಸ್ಸಾಂನ ಮಹಾಮಂಡಲೇಶ್ವರಿ ಯಾಗಮಾಯಾನಂದ ಸರಸ್ವತಿ, ಅಥಣಿ ಚನ್ನ ಬಸವ ಸ್ವಾಮೀಜಿ, ಬೆಳಗಾವಿಯ ಕೃಷ್ಣಾನಂದ ಸ್ವಾಮೀಜಿ, ಉತ್ತರ ಪ್ರದೇಶದ ದಿಗಂಬರ್‌ ನಾಗಭನ ಸರ್ವೇಶ್ವರ, ಒರಿಸ್ಸಾದ ಠಾಕೋರ್‌ ಬಾಯ್‌, ಮಥುರಾದ ನಾಗಭನ ಸ್ವಾಮೀಜಿ, ಬದರಿಕಾಶ್ರಮದ ಮಾಧಮ ಮಹಾಸ್ವಾಮೀಜಿ, ಆಯೋಧ್ಯೆಯ ಶ್ರೀಕಾಂತಾಚಾರ್ಯ ಸ್ವಾಮೀಜಿ, ಮತ್ತಿತರರು ತಮ್ಮ ಅಭಿಪ್ರಾಯ ಮಂಡಿಸಿದರು. 160 ಸಂತರು ಭಾಗವಹಿಸಿದ್ದರು.

***

ಸತ್ಯ ನುಡಿಯುವುದೇ ನಿಜವಾದ ಧರ್ಮಾಚರಣೆ

ಧರ್ಮದ ಮತ್ತೊಂದು ಅರ್ಥವೇ ಸತ್ಯವಾಗಿದ್ದು, ಸತ್ಯ ನುಡಿಯುವುದೇ ನಿಜವಾದ ಧರ್ಮಾಚರಣೆ ಎಂದು ನಿಸರ್ಗ ಕೃಷಿಯ ಪ್ರತಿಪಾದಕ ಸುಭಾಷ್‌ ಪಾಳೇಕರ್‌ ಹೇಳಿದರು.

ಅವರು ವಿಶ್ವ ಗೋ ಸಮ್ಮೇಳನದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳಿಂದ ಗೋಪಾಲಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ರಾಮಚಂದ್ರಾಪುರ ಮಠಾಧೀಶರು ಭಾರತೀಯ ಗೋತಳಿಯ ಮಹತ್ವದ ಸತ್ಯವನ್ನು ಜಗತ್ತಿಗೆ ಸಾರುವ ಮೂಲಕ ನಿಜವಾದ ಧರ್ಮಾಚರಣೆಯಲ್ಲಿ ತೊಡಗಿದ್ದಾರೆ ಎಂದರು.

ತಮಗೆ ದೊರೆತ ಈ ಪ್ರಶಸ್ತಿ ಭಾರತೀಯ ಗೋವುಗಳಿಗೆ ಮತ್ತು ಅವುಗಳ ಶ್ರೇಷ್ಠತೆಗೆ ಸಂದ ಗೌರವ ಎಂದು ಅವರು ಅಭಿಮಾನದಿಂದ ಹೇಳಿದರು.

***

ದೇಶ ವಿದೇಶಗಳಿಂದ ಆಗಮನ..

ಇಂದಿನ ಗೋ ವಿಚಾರ ಮಂಥನದಲ್ಲಿ ಗೋವು ಸಂಸ್ಕೃತಿ ವಿಚಾರ ಮಂಡನೆಯಾಗಿದೆ. ಪೌರಾಣಿಕ ಸಾಹಿತ್ಯದಲ್ಲಿ ಭಾರತೀಯ ಗೋವು. ಗೋವು-ಕ್ರಿಶ್ಚಿಯನ್‌ ಧರ್ಮ ದೃಷ್ಟಿ, ಇಸ್ಲಾಂ ಮತ್ತು ಗೋವು, ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯಗಳಲ್ಲಿ ಗೋವು, ಬಾಂಗ್ಲಾ ದೇಶದಲ್ಲಿ ಗೋವು ಮತ್ತು ಜನಜೀವನ ಮೊದಲಾದ ವಿಚಾರಗಳು ಚರ್ಚೆಗೆ ಬಂದವು.

ನವದೆಹಲಿಯ ಸುಭೋದ್‌ ಕುಮಾರ್‌, ಮಹ್ಮದ್‌ ಅಫ್ಜಲ್‌, ಶಿವಮೊಗ್ಗದ ಫಾ. ಸ್ಟ್ಯಾನಿ ಡಿ.ಸೋಜಾರವರು ಎ.ಕೆ.ಎಫ್‌.ಹೆಚ್‌ ಬನಿತಾನ್‌, ಮಲೇಶಿಯಾದ ಪಶುಸ್ವಭಾವ, ಪಶುಉತ್ಪನ್ನ ತಜ್ಞ ಡಾ।। ದೇವೇಂದ್ರರೇ ಮೊದಲಾದ ಗಣ್ಯರು ತಮ್ಮ ವಿಚಾರ ಮಂಡಿಸಿ ಸಂವಾದ ನಡೆಸಿದರು.

ವಿನಾಶದ ಅಂಚಿನಲ್ಲಿರುವ ದೇಶೀಯ ಗೋತಳಿಗಳನ್ನು ಸಂರಕ್ಷಿಸಬೇಕು ಎಂದು ಬಾಂಗ್ಲಾದೇಶದ ಅನಿಮಲ್‌ ಬ್ರೀಡಿಂಗ್‌ ಮತ್ತು ಜೆನೆಟಿಕ್‌ ವಿಭಾಗದ ಮುಖ್ಯಸ್ಥರಾದ ಬುನಿಯಾನ್‌ ಹೇಳಿದರು.

ಮುಸ್ಲಿಂ ಧರ್ಮದವರೇ ಅಧಿಕವಾಗಿರುವ ಬಾಂಗ್ಲಾದೇಶದಲ್ಲಿ ಸುಮಾರು 24 ಮಿಲಿಯನ್‌ ಗೋವುಗಳಿವೆ, ಅಲ್ಲಿನ ರೈತರ ಅವಶ್ಯಕಥೆಗಳಾದ ಆಹಾರ, ಉರುವಲು ಮತ್ತು ಗೊಬ್ಬರದ ಶೇಕಡಾ 90ಭಾಗ ಗೋವುಗಳಿಂದಲೆ ಪೂರೈಕೆಯಾಗುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ರೆಡ್‌ ಚಿತ್‌ ಗಾಂಗ್‌, ಪಾಬ್ನಾ , ಮುನಿಗಂಜ್‌, ಪ್ರಮುಖ ದೇಶೀಯ ತಳಿಗಳಾಗಿದ್ದು ಅವುಗಳ ಸಂತತಿ ತಳಿಸಂಕರಣ ಹಾಗೂ ಆಧುನೀಕತೆಯ ಜೀವನಕ್ಕೆ ಮಾರು ಹೋದವರಿಂದ ನಾಶವಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more