ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಗೋ ಸಮ್ಮೇಳನ : ದಿನ-4ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮಗಳ ಕಣ್ಣಲ್ಲಿ ಗೋಮಾತೆ!

By Staff
|
Google Oneindia Kannada News

ಜನರಿಗೆ ದೂರವಾದ ವ್ಯಾಪಾರ ಮಳಿಗೆ :

ವಿಶ್ವ ಗೋ ಸಮ್ಮೇಳನ ಅಂಗವಾಗಿ ಇಲ್ಲಿ ಬೃಹತ್‌ ಜಾತ್ರೆಯೇ ನೆರೆದಿದೆ. ಬಸ್‌ ನಿಲ್ದಾಣದಿಂದ ಸಲ್ಪ ಕೆಳಭಾಗದಲ್ಲಿ ಸಾಲು ಸಾಲು ಮಾರಾಟ ಮಳಿಗೆಗಳಿವೆ. ಸರ, ಬಳೆ ಸೇರಿದಂತೆ ವಿವಿಧ ಅಲಂಕಾರಿಕ ಸಾಮಗ್ರಿಗಳ ಅಂಗಡಿಗಳು ಸ್ತ್ರೀ ಸಮೂಹವನ್ನು ಆಕರ್ಷಿಸುತ್ತಿವೆ. ಬಿಸಿಲ ತಾಪ ಹೆಚ್ಚಾಗಿರುವುದರಿಂದ ಐಸ್‌ ಕ್ರೀ ಅಂಗಡಿಗಳು ತಮ್ಮತ್ತ ಜನರನ್ನು ಸೆಳೆಯುತ್ತಿವೆ. ಆದರೆ ಉಳಿದ ವ್ಯಾಪಾರಸ್ಥರು ಗಿರಾಕಿಗಳಿಲ್ಲದೆ ಬವಣೆ ಅನುಭವಿಸುತ್ತಿದ್ದಾರೆ.

ಪುಸ್ತಕ ಮಳಿಗೆಯ ದಿನೇಶ್‌ ಹೇಳುತ್ತಾರೆ, ಮುಖ್ಯ ವೇದಿಕೆ ಬಳಿ ವ್ಯಾಪಾರ ಮಳಿಗೆಗೆ ವ್ಯವಸ್ಥೆ ಮಾಡಿದ್ದರೆ, ಸ್ವಲ್ಪ ವ್ಯಾಪಾರ ಹೆಚ್ಚಾಗುತ್ತಿತ್ತು. ಆದರೆ ಇದು ಇಂಟೀರಿಯರ್‌ ಆದ್ದರಿಂದ ಹೆಚ್ಚು ಜನ ಬರುತ್ತಿಲ್ಲ ಎನ್ನುತ್ತಾರೆ.

ನವ ಕರ್ನಾಟಕ ಪುಸ್ತಕ ಮಳಿಗೆಯ ಮಹೇಶ್‌ ಪ್ರತಿಕ್ರಿಯಿಸಿ, ಸಂಜೆ ಮತ್ತು ರಾತ್ರಿ ವೇಳೆ ಸಲ್ಪ ಹೆಚ್ಚು ಜನರ ನಿರೀಕ್ಷೆ ಇರುತ್ತೆ. ಆದರೆ ಜನ ಬಂದಾಗ ಕರೆಂಟ್‌ ಕೈ ಕೊಡುತ್ತದೆ. ಏನು ಮಾಡೋಣ ಅಂತಾರೆ.

ತುಂಬಾ ನಿರೀಕ್ಷೆಯಿಂದ ಮಳಿಗೆ ಹಾಕಿದೆವು. ಸ್ವಲ್ಪ ವ್ಯಾಪಾರ ಡಲ್‌ ಇದೆ. ಸಮ್ಮೇಳನಕ್ಕೆ ಬಂದವರು ಮಾರಾಟ ಮಳಿಗೆ ಎಡೆಗೆ ಆಕರ್ಷಿತರಾಗುವಂತೆ ಆಯೋಜಕರು ಒಂದಿಷ್ಟು ಬ್ಯಾನರ್‌ ಹಾಕಬೇಕು. ಧ್ವನಿ ವರ್ಧಕದಲ್ಲಿ ಪ್ರಚಾರ ಮಾಡಬೇಕು. ಆಗ ಜನ ಇತ್ತ ಬರುತ್ತಾರೆ ಎಂದರು ದೇಸಿ ಮಳಿಗೆಯ ಸಜಾ ರ್ಶಂಕರ್‌.

***

ಹರೇ ಕೃಷ್ಣ ಎಂದ ಹಂಗೇರಿಯ ಹಮ್ಮೀರರು

ಹರೇ ಕೃಷ್ಣ ... ಹರೇ ರಾಮ..... ಇದು ಸಮ್ಮೇಳನಕ್ಕೆ ಆಗಮಿಸಿದ ಭಾರತೀಯ ಗೋ ಪ್ರೇಮಿಗಳ ಮೂಲ ಮಂತ್ರವಾಗದೇ ವಿದೇಶಿಯರ ಬಾಯಲ್ಲೂ ವಿಜೃಂಭಿಸುತ್ತಿದೆ.

ಹಂಗೇರಿಯಿಂದ ಆಗಮಿಸಿರುವ ಇಸ್ಕಾನ್‌ನ ಗೋ ಸಂರಕ್ಷಣಾ ವಿಭಾಗ ಮಂತ್ರಿ ಬಲಭದ್ರದಾಸ್‌ , ಅವರ ಪತ್ನಿ ಛಾಯಾದೇವಿ, ಗೋ ಶಾಲೆ ವ್ಯವಸ್ಥಾಪಕ ಗೋವಿಂದ ನಂದನ ದಾಸ್‌, ರಾಧಾ ಕೃಷ್ಣ ದಾಸ್‌ ಮಾತೆತ್ತುವ ಮುನ್ನ ಹರೇರಾಮ, ಹರೇ ಕೃಷ್ಣ ಎನ್ನುತ್ತಾರೆ.

ಇವರೆಲ್ಲರೂ ಇಸ್ಕಾನ್‌ ಪಂಥಕ್ಕೆ ಸೇರಿ ತಮ್ಮ ಮೂಲ ಹೆಸರು ಬದಲಾಯಿಸಿಕೊಂಡು ಭಾರತೀಯತೆಯನ್ನು ಅಪಾರವಾಗಿ ಪ್ರೀತಿಸುವ ಮಂದಿ.

ಸುದ್ದಿಗಾರರ ಜೊತೆ ಮಾತನಾಡಿದ ಛಾಯಾದೇವಿ, ನಾವೆಲ್ಲರೂ ಮೂಲತಃ ಮಾಂಸಾಹಾರಿಗಳು. ಆದರೆ ಇಸ್ಕಾನ್‌ ಪ್ರಭಾವದಿಂದ ಸಂಕೀರ್ಣ ಭಾರತೀಯ ಆಹಾರ ಪದ್ಧತಿ ಗೆ ಶರಣಾಗಿದ್ದೇವೆ. ಅದರಲ್ಲೂ ಸಾತ್ವಿಕ ಆಹಾರ. ಈರುಳ್ಳಿ, ಬೆಳ್ಳುಳ್ಳಿ ಸಹಾ ಮುಟ್ಟುವುದಿಲ್ಲ .ಹಾಗಾಗಿ ಇಲ್ಲಿ ಸಾಮಾನ್ಯ ಕೌಂಟರುಗಳಲ್ಲೇ ಆಹಾರ ಪಡೆಯುತ್ತೇವೆ ಎಂದರು.

ನಮ್ಮ ನಾಡಿನಲ್ಲೂ ಗೋವಿನ ಮಹತ್ವ ಸಾರುತ್ತಿದ್ದೇವೆ. ವಿವಿಧ ಸಂಶೋಧನೆ ನಡೆಯುತ್ತಿದೆ. ಇಲ್ಲಿ ಇಷ್ಟು ದೊಡ್ಡ ಸಮ್ಮೇಳನ ಆಯೋಜಿಸಿರುವುದು ಅಚ್ಚರಿ ತರಿಸಿದೆ. ಮಠದ ಕಾರ್ಯಚಟುವಟಿಕೆಯನ್ನು ವೆಬ್‌ ಸೈಟಿನಲ್ಲಿ ನೋಡಿದ್ದೆ. ಈಗ ಪ್ರತ್ಯಕ್ಷ ಕಂಡು ಬೆರಗಾಗಿದೆ ಎಂದರು ಗೋವಿಂದ ನಂದನ ದಾಸ್‌.

ಇಡೀ ತಂಡಕ್ಕೆ 10 ವರ್ಷದಿಂದ ಇಸ್ಕಾನ್‌ ಸಹವಾಸ. ಪಂಚೆ, ಶಲ್ಯ, ಸೀರೆ, ಹಣೆಗೆ ಗೋಪಿ ಚಂದನ ನಾಮ- ಹೀಗೆ ಉಡುಗೆ ತೊಡುಗೆಯಲ್ಲೂ ಭಾರತೀಯತೆ ಪ್ರತಿಬಿಂಬ ಇವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X