• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಗೋ ಸಮ್ಮೇಳನ : ದಿನ-4ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮಗಳ ಕಣ್ಣಲ್ಲಿ ಗೋಮಾತೆ!

By Staff
|

ಗೋ ಹತ್ಯೆ ಮಾಡುವಾತ ನಿಜವಾದ ಮುಸಲ್ಮಾನ ಅಲ್ಲ..

ಗೋ ಹತ್ಯೆ ಮತ್ತು ಗೋ ಮಾಂಸ ಭಕ್ಷಣೆ ಮಾಡುವಾತ ನಿಜವಾದ ಮುಸಲ್ಮಾನ ಅಲ್ಲ -ಹೀಗೆಂದು ಕಟುವಾಗಿ ಹೇಳಿದವರು ದಿಲ್ಲಿಯ ರಾಷ್ಟ್ರವಾದಿ ಮುಸ್ಲಿಂ ಅಂದೋಲನ್‌ ರಾಷ್ಟ್ರೀಯ ಸಂಘಟಕ ಮೊಹಮದ್‌ ಅಫ್ಜಲ್‌.

ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋ ಹತ್ಯೆ ವಿರೋಧಿಸಿ ರಾಷ್ಟ್ರವ್ಯಾಪಿ ಮುಸಲ್ಮಾನರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲು ತಮ್ಮ ಸಂಘಟನೆ ನಿರ್ಧರಿಸಿದೆ. ಇದರ ಪ್ರತಿಯನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗೆ ಅರ್ಪಿಸಲಾಗುತ್ತದೆ ಎಂದರು.

ಪ್ರವಾದಿ ಮೊಹಮದ್‌ ಪೈಗಂಬರ್‌ ಹಾಲು ತುಪ್ಪ ಔಷಧೀಯ ಗುಣ ಹೊಂದಿದೆ. ಗೋ ಮಾಂಸ ರೋಗದಾಯಕ ಎಂಬ ಸಂದೇಶ ನೀಡಿದ್ದಾರೆ. ಎಲ್ಲಿಯೂ ಗೋ ಹತ್ಯೆ ಮಾಡಲು ಹೇಳಿಲ್ಲ.

ಈ ನಾಡಿನ ಮುಸಲ್ಮಾನರು ಧರ್ಮವನ್ನು ಮಾತ್ರ ಅರಬ್‌ನಿಂದ ಪಡೆದಿದ್ದು, ಆಚರಣೆಗಳಲ್ಲಿ ಅನೇಕ ಭಾರತೀಯ ಅಂಶ ರೂಢಿಸಿಕೊಂಡಿದ್ದಾರೆ. ಅರಬ್‌ನಲ್ಲಿ ಪೈಗಂಬರರ ಜಯಂತಿ ಎಂದೂ ಆಚರಿಸುವುದಿಲ್ಲ. ಆದರೆ ರಾಮ, ಕೃಷ್ಣರ ಜಯಂತಿ ಮಾದರಿಯಲ್ಲೇ ಭಾರತೀಯ ಮುಸಲ್ಮಾನರು ಪೈಗಂಬರ್‌ ಜಯಂತಿ ಆಚರಣೆ ನಡೆಸುತ್ತಿದ್ದಾರೆ. ಬಹುತೇಕ ಮಂದಿ ಮತಾಂತರಗೊಂಡ ಮುಸಲ್ಮಾನರು ಇಲ್ಲಿದ್ದಾರೆ . ಹಾಗಾಗಿ ಮಿಶ್ರ ಸಂಸ್ಕೃತಿ ಬಂದಿದೆ. ಪ್ರತ್ಯೇಕತೆ ಸಲ್ಲ ಎಂದರು.

***

ಕ್ರೈಸ್ತ ಧರ್ಮ ಗೋ ವಿರೋಧಿಯಲ್ಲ..

ಕ್ರಿಶ್ಚಿಯನ್‌ ಧರ್ಮ ಗ್ರಂಥ ಜನಪದ ಜನಜೀವನದಲ್ಲಿ ಗೋವುಗಳಿಗೆ ಪವಿತ್ರ ಸ್ಥಾನವಿದೆ ಎಂದು ಕ್ರೈಸ್ಥ ಧರ್ಮ ಗುರು ಸ್ಟ್ಯಾನಿ ಡಿಸೋಜ ಹೇಳಿದರು.

ಅವರು ವಿಶ್ವ ಗೋ ಸಮ್ಮೇಳನದ ಗೋ ವಿಚಾರ ಮಂಥನದಲ್ಲಿ ಕ್ರಿಶ್ಚಿಯನ್‌ ಧರ್ಮ ದೃಷ್ಟಿಯಲ್ಲಿ ಗೋವುಗಳ ಸ್ಥಾನ ಎಂಬ ವಿಚಾರದಲ್ಲಿ ಮಾತನಾಡಿದರು.

ಬೈಬಲ್ಲಿನ ಹಲವುಕಡೆ ಹಲವು ಕಡೆ ಗೋವಿನ ಉಲ್ಲೇಖವಿದೆ. ದೇವರು ಪ್ರಥಮವಾಗಿ 5 ದಿನಗಳ ಕಾಲ ಸೃಷ್ಟಿಸಿದ ಚರಾಚರ ವಸ್ತುಗಳಲ್ಲಿ ಗೋವು ಒಂದು, ಸುವಾರ್ತೆಯಲ್ಲಿ ಲೂಕ ಎರಡನೆ ಅಧ್ಯಾಯ 7ನೇ ವಚನದಲ್ಲಿ ಕ್ರಿಸ್ತ ಗೋದಲಿ(ಕೊಟ್ಟಿಗೆ)ಯಲ್ಲಿ ಜನಿಸಿದ ಉಲ್ಲೇಖವಿದೆ. ಏಸುಕ್ರಿಸ್ತನಿಗೆ ಮೊದಲ ತಾಯಿ ಮರಿಯಮ್ಮನಾದರೆ, ಎರಡನೆ ತಾಯಿ ಗೋವು ಪ್ರಭುವಿಗೆ ಗೋಸ್ಪರ್ಶ ಗೋ ಮಡಿಲು ಗೋ ಆಹಾರ ಗೋವಿನ ಉಸಿರಾಟದ ಗಾಳಿ ದೊರೆತುದರಿಂದ ಹೊಸ ಶಕೆ ಆರಂಭವಾಗಲು ಮೂಲವಾಯಿತು ಎಂದರು.

ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದೂರರ್ಶಿತ್ವದ ವಿಶ್ವ ಗೋ ಸಮ್ಮೇಳನ ಸಕಾಲಿಕ ಸಮಯೋಚಿತ ಎಂದು ಅಭಿಪ್ರಾಯ ಪಟ್ಟ ಅವರು ಗೋವಿನ ಸಂತತಿ ಉಳಿಸಿಕೊಳ್ಳಲು ಜಾತಿ, ಮತ ಬೇಧಗಳನ್ನು ಬದಿಗೊತ್ತಿ ಎಲ್ಲರೂ ಕಾರ್ಯಪ್ರವೃತ್ತರಾಗಲು ಕರೆಯಿತ್ತರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more