• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋ ಸಮ್ಮೇಳನಕ್ಕೆ ವ್ಯಾಪಕ ಬೆಂಬಲ.. ನೆರವಿನ ಮಹಾಪೂರ

By Staff
|
ವಿಶ್ವ ಗೋ ಸಮ್ಮೇಳನದ ಅಂಗಳದಲ್ಲಿ ಏನೇನು ನಡೆದಿದೆ? ಸಾರ್ವಜನಿಕರ ಪ್ರತಿಸ್ಪಂದನ ಹೇಗಿದೆ? ನೀವೇ ನೋಡಿ..

ಶ್ರೀ ರಾಮಚಂದ್ರಾಪುರಮಠ ಭಾರತೀಯ ಗೋತಳಿಯನ್ನು ಉಳಿಸಿ ಬೆಳೆಸುವ ಪರಮಪೂಜ್ಯ ತಾಣ. ಇಲ್ಲೀಗ ವಿಶ್ವ ಗೋ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುತ್ತಿದೆ. ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರ ಸಂಕಲ್ಪಕ್ಕೆ ಕರ್ನಾಟಕ ರಾಜ್ಯಮಾತ್ರವಲ್ಲ ದೇಶದ ನಾನಾ ಕಡೆಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಏಳುವರ್ಷಗಳ ಹಿಂದೆ ಶ್ರೀಮಠ ಪ್ರಾರಂಭಿಸಿದ ಕಾಮದುಘಾಯೋಜನೆ ಇಂದು ಇಡೀ ದೇಶವನ್ನೇ ವ್ಯಾಪಿಸಿದೆ. ಇದೀಗ ಚಾಲನೆಗೊಂಡಿರುವ ವಿಶ್ವಗೋ ಸಮ್ಮೇಳನದಲ್ಲಿ ನಾನಾಕಡೆಗಳಿಂದ 30ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಇದೆ.

ಸಮ್ಮೇಳನದ ಸುವಸ್ತು ಸಂಗ್ರಹ ವಿಭಾಗದ ಸಂಚಾಲಕ ಹರಿಪ್ರಸಾದ್‌ ಪೆರಿಯಾಪು ಅವರು ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದರು.

ಕೃಷಿಕರ ಜೀವನಾಡಿಯಾದ ಗೋವನ್ನು ಭಾರತೀಯರು ಎಷ್ಟೊಂದು ಪೂಜ್ಯಭಾವನೆಯಿಂದ ಕಾಣುತ್ತಾರೆಂಬುದನ್ನು ವಿಶ್ವ ಗೋ ಸಮ್ಮೇಳನಕ್ಕೆ ಜನತೆ ಸ್ಪಂದಿಸುತ್ತಿರುವ ರೀತಿ ಸಾಕ್ಷಿಯಾಗಿದೆ. ಸಮ್ಮೇಳನದಂಗವಾಗಿ ಹಮ್ಮಿಕೊಳ್ಳಲಾದ ಸುವಸ್ತು ಸಂಗ್ರಹ ಅಭಿಯಾನದಲ್ಲಿ ನೂರೈವತ್ತು ಟನ್‌ ಅಕ್ಕಿ, ಒಂದೂವರೆ ಟನ್‌ ಕಾಫಿಬೀಜ ಸಂಗ್ರಹವಾಗಿದೆ ಎಂದರು.

100 ಕ್ವಿಂಟಲ್‌ ಬೇಳೆ, 25ಟನ್‌ ಸಕ್ಕರೆ ಸಂಗ್ರಹವಾಗಿದೆ. ರಾಜ್ಯ ಹಾಗೂ ಹೊರರಾಜ್ಯದ ಉದ್ಯಮಿಗಳಿಂದ, ವ್ಯಾಪಾರಿಗಳಿಂದ, ಜನಪ್ರತಿನಿಧಿಗಳಿಂದ ಅಷ್ಟೇಅಲ್ಲ ಸಾಮಾನ್ಯ ಜನರೂ ಸಹ ಜಾತಿ ಮತ ಬೇಧವಿಲ್ಲದೇ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾಮಧೇನು ತುಲಾಭಾರ ವಿಶ್ವ ಗೋಸಮ್ಮೇಳನದ ಕೇಂದ್ರಬಿಂದುವೆನಿಸಿದೆ. ಗೋವನ್ನು ಭಾರತೀಯ ಕೃಷಿಕರು ಎಷ್ಟೊಂದು ಗೌರವಿಸುತ್ತಾರೆಂಬುದಕ್ಕೆ ಇದು ಹಿಡಿದ ಕನ್ನಡಿ. ಗೋ ಭಕ್ತರು ತಮ್ಮ ಕೈಲಾದ ಯಾವುದೇ ವಸ್ತುವಿನಿಂದ ಗೋ ತುಲಾಭಾರ ನಡೆಸಬಹುದಾಗಿದೆ. ತುಲಾಭಾರ ಕೈಂಕರ್ಯಕ್ಕಾಗಿ 5 :: 7 ಅಡಿ ಉದ್ದಗಲದ ಬಟ್ಟಲುಗಳುಳ್ಳ ತಕ್ಕಡಿಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.

ಇಮಾಮಿ ಸಂಸ್ತೆಯ ಅಧ್ಯಕ್ಷ ರಾಧೇ ಶಾಂ ಗೊಯಂಕಾರವರು ಏಪ್ರಿಲ್‌ 28ರಂದು 125ಕೆ.ಜಿ. ಬೆಳ್ಳಿಯಿಂದ ಗೋ ತುಲಾಭಾರ ನಡೆಸಿಕೊಡುತ್ತಾರೆ. ಹುಬ್ಬಳ್ಳಿಯಿಂದ ಭಾರತೀ ದೇಶಪಾಂಡೆ ಎಂಬುವವರು 450 ಚೀಲ ನಿಂಬೆ ಹಣ್ಣನ್ನು ಕಳುಹಿಸಿರುತ್ತಾರೆ. ಗಂಗಾವತಿಯಿಂದ ಅಕ್ಕಿಉದ್ಯಮಿಗಳಿಂದ 13ಟನ್‌ ಅಕ್ಕಿ ಕಳಿಸಿದ್ದಾರೆ. ಕಲಬುರ್ಗಿಯ ವ್ಯಾಪಾರಿಗಳು 100 ಕ್ವಿಂಟಾಲ್‌ ಬೇಳೆ ಕಳಿಸಿದ್ದಾರೆ. ಚಿಕ್ಕಮಗಳೂರಿನ ಕಾಫಿ ವ್ಯಾಪಾರಿಗಳು 1.5ಟನ್‌ ಕಾಫಿ ಬೀಜ ಕಳಿಸಿದ್ದಾರೆ. ಗೋವು ಎಲ್ಲ ದೇವರಿಗೂ ಮಿಗಿಲಾದುದು ಎಂಬ ಭಾರತೀಯರ ಭಾವನೆಗೆ ಇದು ಸಾಕ್ಷಿಯಾಗಿದೆ ಎಂದು ಹರಿಪ್ರಸಾದ್‌ ಪೆರಿಯಾಪು ವಿವರಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more