ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೂಲ್ಮರ್‌ ಹತ್ಯೆ : ಕೊಲೆಗಾರ ಯಾರೆಂದು ಗೊತ್ತಾಯ್ತು...!

By Staff
|
Google Oneindia Kannada News

Woolmer murder case : Suspect identified from CCTV grabಕಿಂಗ್‌ಸ್ಟನ್‌ : ಪಾಕಿಸ್ತಾನ ಕ್ರಿಕೆಟ್‌ ತಂಡದ ಕೋಚ್‌ ಬಾಬ್‌ ವೂಲ್ಮರ್‌ ಕೊಲೆ ಮಾಡಿದವ ಯಾರೆಂದು ಗೊತ್ತಾಗಿದ್ದು, ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಕೊಲೆ ನಡೆದ ಪೆಗಸಿಸ್‌ ಹೋಟೆಲ್‌ನ ಪ್ರಾಂಗಣ ಹಾಗೂ ಹನ್ನೆರಡನೇ ಮಹಡಿಯಲ್ಲಿನ ಸಿಸಿಟಿವಿಯಲ್ಲಿ ಘಟನೆಯ ವೀಡಿಯೋ ಚಿತ್ರಣ ದಾಖಲಾಗಿತ್ತು. ಇದನ್ನು ಉನ್ನತಮಟ್ಟದ ತನಿಖೆಗೆ ಕಳುಹಿಸಿಕೊಡಲಾಗಿತ್ತು. ತಜ್ಞರು ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಶಂಕಿತ ಕೊಲೆಗಾರ ಯಾರೆಂದು ಪತ್ತೆಹಚ್ಚಲಾಗಿದೆ ಎಂದು ಮೂಲಗಳು ಹೇಳಿವೆ.

ಆದರೆ ಈ ಕುರಿತು ಜಮೈಕಾ ಪೊಲೀಸರಾಗಲಿ ಅಥವಾ ತನಿಖಾ ತಂಡದ ಅಧಿಕಾರಿಗಳಾಗಲಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ವೂಲ್ಮರ್‌ಗೆ ಅಕೊನೈಟ್‌ ಎಂಬ ವಿಷವುಣಿಸಿ, ಆನಂತರ ಬಲಪ್ರಯೋಗ ಮಾಡಿ ಹತ್ಯೆ ಮಾಡಲಾಗಿದೆ ಎಂದು ಉನ್ನತಮಟ್ಟದ ಪರೀಕ್ಷೆ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಗ್ಗಂಟಾಗಿದ್ದ ತನಿಖೆ ನಿರ್ಣಾಯಕ ಹಂತಕ್ಕೆ ಬಂದಂತಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X