• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಗೋ ಸಮ್ಮೇಳನಲ್ಲಿ ‘ಅಂಬಾ ಅಂಬಾ’ ಎನ್ನುವ ನಿನಾದ

By Staff
|

ಹೊಸನಗರ(ಶಿವಮೊಗ್ಗ ಜಿಲ್ಲೆ) : ಮಲೆನಾಡಿನ ಸೆರಗಲ್ಲಿ ಹರಿಯುವ ಶರಾವತಿ ನದಿತೀರದ ಶ್ರೀರಾಮಚಂದ್ರಪುರ ಮಠದ ಆವರಣದಲ್ಲೀಗ ಹಸು-ಕರುಗಳ ಜಾಗತಿಕ ಜಾತ್ರೆ.

ಏ.21 ಅಂದರೆ ಇಂದಿನಿಂದ ಏ.29ರ ತನಕ ವಿಶ್ವ ಗೋ ಸಮ್ಮೇಳನದ ಸಡಗರ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದ ವೇದಿಕೆಯಿಂದ, ಗೋ ಸಮುದಾಯಕ್ಕೆ ಭರವಸೆಯ ಸಂದೇಶ ರವಾನೆ. ಈ ಕ್ಷಣಗಳಿಗೆ ಸಾಕ್ಷಿಯಾಗಲು, ದೇಶ ವಿದೇಶಗಳಿಂದ ಹೊಸನಗರ ತಾಲೂಕಿನ ಈ ಮಠಕ್ಕೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಶನಿವಾರ ಮಧ್ಯಾಹ್ನ ಸಮ್ಮೇಳನದ ಜಾಗದಲ್ಲಿ ಏನೋ ಸಡಗರ. ಕಾರಣಗಿರಿಯ ಸಿದ್ಧಿ ವಿನಾಯಕನ ರಥೋತ್ಸವದೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಕಾಮಧೇನು ಸಂಕೀರ್ತನೆ, ಗೋಪುರ ಕೀರ್ತನೆ, ಪುಣ್ಯ ಕೋಟಿ ತುಲಾಭಾರ ಮತ್ತಿತರ ಕಾರ್ಯಕ್ರಮಗಳು ಆರಂಭಗೊಂಡಿವೆ. ತುಲಾಭಾರ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಜರಿದ್ದರು.

ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ಸಚಿವ ಈಶ್ವರಪ್ಪ, ರೇವಣ್ಣ ಮತ್ತಿತರ ಸಚಿವರು ಗೋ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು.

ಹಾಯ್‌ ಒಬೇರಾಯ್‌...

ಸಮ್ಮೇಳನದ ಮುನ್ನಾ ದಿನವೇ ತನ್ನ ತಂಗಿ ಮೇಘನಾ ಜೊತೆ ಬಾಲಿವುಡ್‌ ನಟ ವಿವೇಕ್‌ ಒಬೇರಾಯ್‌ ಆಗಮನ. ಆ ಪರಿಣಾಮ ಸಮ್ಮೇಳನಕ್ಕೆ ತಾರಾರಂಗು. ಎತ್ತಿನಗಾಡಿ ಓಡಿಸುವ ಮೂಲಕ, ಸಾಮೂಹಿಕ ಎತ್ತಿನ ಗಾಡಿ ಮೆರವಣಿಗೆಗೆ ಅವರಿಂದ ಲವಲವಿಕೆ.

ಗೋಹತ್ಯೆ ಖಂಡಿಸುವ ಎದೆಗಾರಿಕೆಯನ್ನು ನಾವು ಹೊಂದಬೇಕು. ದೇಶೀಯ ತಳಿಗಳ ರಕ್ಷಣೆ ಇಂದು ನಮ್ಮೆಲ್ಲರ ಅಗತ್ಯ ಎನ್ನುವ ಮೂಲಕ ಸಮ್ಮೇಳನದ ಆಶಯಗಳನ್ನು ಒಬೇರಾಯ್‌ ಎತ್ತಿಹಿಡಿದಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more