ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದಲ್ಲಿ ಇಂದು ಸಂಜೆ ರಾಜೀವ್‌ದೀಕ್ಷಿತ್‌ಭಾಷಣ

By Staff
|
Google Oneindia Kannada News

A talk on Globalisation by Rajiv Dixit on April 21ಬೆಂಗಳೂರು : ಅವಿರತ ಸಂಸ್ಥೆ ‘ಜಾಗತೀಕರಣ ಮತ್ತು ನೀವು’ ಎಂಬ ಕಾರ್ಯಕ್ರಮವನ್ನು, ಶನಿವಾರ(ಏ. 21) ಆಯೋಜಿಸಿದೆ. ಅಲ್ಲಿ ಸ್ವದೇಶಿ ಚಳವಳಿ ನೇತಾರ ರಾಜೀವ್‌ ದೀಕ್ಷೀತ್‌ ಭಾಷಣ ಮಾಡಲಿದ್ದಾರೆ.

‘ಆಜಾದಿ ಬಚಾವ್‌ ಆಂದೋಲನ’ದ ವಕ್ತಾರ ರಾಜೀವ್‌ ದೀಕ್ಷೀತ್‌, ಮೂಲತಃ ಉಪಗ್ರಹ ತಂತ್ರಜ್ಞಾನ ವಿಜ್ಞಾನಿ ಹಾಗೂ ಮಹಾತ್ಮ ಗಾಂಧಿ ತತ್ವಚಿಂತಕರು. ತಮ್ಮ ಆಚಾರ-ವಿಚಾರಗಳಿಂದ ಅವರು ಯುವಕರ ಕಣ್ಮಣಿ. ಅವರ ಭಾಷಣ ಕೇಳುವ ಜೊತೆ, ಅವರೊಂದಿಗೆ ಸಂವಾದ ನಡೆಸುವ ಅವಕಾಶವೂ ಇದೆ. ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಜಯನಗರದ ಆರ್‌.ವಿ.ರಸ್ತೆಯ ಟೀಚರ್ಸ್‌ ಕಾಲೇಜು ಸಭಾಂಗಣದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

ವಿಶೇಷ ಆರ್ಥಿಕ ವಲಯ ಕುರಿತು ಚರ್ಚೆ :

ಅವಿರತ ಸಂಸ್ಥೆಯು ಬುದ್ಧಿಜೀವಿಗಳು ಹಾಗೂ ತಜ್ಞರ ಜತೆಗೆ ಏಪ್ರಿಲ್‌ 22ರಂದು ಬೆಳಗ್ಗೆ 10.30ಕ್ಕೆ ವಿಶೇಷ ಆರ್ಥಿಕ ವಲಯ ನೀತಿಯನ್ನು ಕುರಿತಾದ ಸಂವಾದವನ್ನು ನಡೆಸುತ್ತಿದೆ. ಪ್ರಕಾಶ್‌ ಬೆಳವಾಡಿ ಅವರ ಕಚೇರಿಯಲ್ಲಿ ಸಂವಾದ ನಡೆಯಲಿದ್ದು, ಇದು ಸಾರ್ವಜನಿಕ ಸಮಾವೇಶವಲ್ಲ.

ಚರ್ಚೆಯಲ್ಲಿ ಲಂಕೇಶ್‌ ಪತ್ರಿಕೆಯ ಶಿವಸುಂದರ್‌, ವಿಜಯ ಕಾಲೇಜಿನ ವಿ.ಎಸ್‌ ಶ್ರೀಧರ್‌, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ಬೆಂಗಳೂರು ಬಯಾಸ್‌ ಸಂಪಾದಕ ಪ್ರಕಾಶ್‌ ಬೆಳವಾಡಿ ಪಾಲ್ಗೊಳ್ಳುವರು.

ಈ ಸಂವಾದದಲ್ಲಿ ಭಾಗವಹಿಸಲು ಇಚ್ಛಿಸುವವರು ಪಾಸ್‌ಗಳನ್ನು ಮೊದಲೇ ಪಡೆಯತಕ್ಕದ್ದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಡಾ. ಹಿಮಾಂಶು : 98459 88444

ಚಲನಚಿತ್ರ ಪ್ರದರ್ಶನ :

ಸದಭಿರುಚಿ ಚಲನಚಿತ್ರಗಳನ್ನು ಪ್ರದರ್ಶಿಸುತ್ತ ಬಂದಿರುವ ಅವಿರತ ಸಂಸ್ಥೆ , ಏಪ್ರಿಲ್‌ 29ರ ಭಾನುವಾರ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾಯಿನೆರಳು’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಿದೆ. ಮಲ್ಲೇಶ್ವರದ 18 ನೇ ಅಡ್ಡರಸ್ತೆ ಬಳಿ ಇರುವ ಶ್ರೀಗಂಧ ಪ್ರಿವ್ಯೂ ಚಿತ್ರಮಂದಿರದಲ್ಲಿ ಮಧ್ಯಾಹ್ನ 3ಕ್ಕೆ ಏರ್ಪಡಿಸಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಕೆ.ಟಿ. ಸತೀಶ್‌ ಗೌಡ, ಅಧ್ಯಕ್ಷರು, ಅವಿರತ.
ದೂರವಾಣಿ ಸಂಖ್ಯೆ: 98800 86300
ಈ ಮೇಲ್‌: [email protected]
ವೆಬ್‌: www.aviratha.org

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X