ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನೇಕಲ್‌ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯ ಸಿಂಚನ

By Staff
|
Google Oneindia Kannada News

ಬೆಂಗಳೂರು : ಗುರುವಾರ ರಾಜ್ಯದ ವಿವಿಧೆಡೆ ಮಳೆಯಾಗಿದ್ದು, ಆನೇಕಲ್‌ನಲ್ಲಿ ಗರಿಷ್ಠ 4 ಸೆಂಟಿ ಮೀಟರ್‌ನಷ್ಟು ದಾಖಲಾಗಿದೆ.

ಯಲಬುರ್ಗಾ, ಕುಕನೂರು, ತಾವರೆಕೆರೆ, ಸಕಲೇಶಪುರ, ಹೊಸಕೋಟೆ, ಸುಬ್ರಮಣ್ಯ, ಮಾಲೂರು, ಶಿರಾದಲ್ಲಿ ತಲಾ 1 ಸೆಂಟಿ ಮೀಟರ್‌ ಮಳೆ ಸುರಿದಿದೆ.

ರಾಜ್ಯದ ಹಲವೆಡೆ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ಕಂಡು ಬಂದಿದ್ದು, ಗುಲ್ಬರ್ಗಾದಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಹವಾಮಾನ ಮುನ್ಸೂಚನೆ(ಶನಿವಾರ ಮುಂಜಾನೆವರೆಗೆ) : ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ, ಕರಾವಳಿ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಬೀಳುವ ಸಾಧ್ಯತೆಯಿದೆ.

ಬೆಂಗಳೂರಿನ ವಾತಾವರಣ : ಭಾಗಶಃ ಮೋಡಗಟ್ಟಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ಮಳೆಬೀಳುವ ಸಂಭವವಿದೆ. ತಾಪಮಾನ ಸುಮಾರು 33 ಡಿಗ್ರಿ ಸೆಲ್ಸಿಯಸ್‌.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X