• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣಾ ರಾಜಕೀಯಕ್ಕೆ ಸಚಿವ ಎಂ.ಪಿ.ಪ್ರಕಾಶ್‌ ವಿದಾಯ

By Staff
|


ಬೆಂಗಳೂರು : ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಗೃಹಸಚಿವ-ಜೆಡಿಎಸ್‌ ರಾಜ್ಯಾಧ್ಯಕ್ಷ ಎಂ.ಪಿ.ಪ್ರಕಾಶ್‌ ಘೋಷಿಸಿದ್ದಾರೆ.

ಬುಧವಾರ(ಏಪ್ರಿಲ್‌ 18) ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಮುಂದಿನ ಜೀವನವನ್ನು ರಂಗಭೂಮಿ ಹಾಗೂ ಸಾಹಿತ್ಯಕ್ಕೆ ಮೀಸಲಿಡುವುದಾಗಿ ಪ್ರಕಟಿಸಿದರು.

12ನೇ ವಿಧಾನಸಭಾ ಸದಸ್ಯತ್ವದ ಅವಧಿ ಪೂರ್ಣಗೊಂಡ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ. ಅಂದರೆ ರಾಜಕೀಯದಿಂದ ಸಂಪೂರ್ಣ ದೂರವಾಗುತ್ತೇನೆಂದು ಅರ್ಥವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಎಸ್‌ನಲ್ಲಿ ತಳಮಳ : ರಾಜಕೀಯದಿಂದ ನಿವೃತ್ತವಾಗುವ ತಮ್ಮ ಇಚ್ಛೆಯನ್ನು ಇತ್ತೀಚಿನ ದಿನಗಳಲ್ಲಿ ಅವರು ವ್ಯಕ್ತಪಡಿಸುತ್ತಿದ್ದರು. ಆದರೆ ಹೀಗೆ ದಿಢೀರನೇ ನಿವೃತ್ತಿ ಘೋಷಿಸುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಜೆಡಿಎಸ್‌ನಲ್ಲಿ ಈ ಸುದ್ದಿ ತಳಮಳ ಉಂಟುಮಾಡಿದ್ದು, ನಿವೃತ್ತಿಯ ನಿರ್ಧಾರ ವಾಪಸು ಪಡೆಯುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೊದಲಾದವರು ಮನವೊಲಿಸಿದರು. ಆದರೆ ಎಂ.ಪಿ.ಪ್ರಕಾಶ್‌ ತಮ್ಮ ನಿರ್ಧಾರ ಬದಲಿಸಲಿಲ್ಲ ಎಂದು ಮೂಲಗಳು ಹೇಳಿವೆ.

ಈ ಬೆಳವಣಿಗೆಯಿಂದ ಜನತಾಪರಿವಾರವನ್ನು ಒಗ್ಗೂಡಿಸುವ ಯತ್ನಕ್ಕೆ ಭಾರೀ ಹಿನ್ನಡೆಯುಂಟಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಎಂ.ಪಿ.ಪ್ರಕಾಶ್‌ ಸ್ಥಾನಕ್ಕೆ ಎಂ.ಪಿ.ರವೀಂದ್ರ...? : ಹೂವಿನ ಹಡಗಲಿ ಮತಕ್ಷೇತ್ರದಲ್ಲಿ ಅವರ ಪುತ್ರ ಎಂ.ಪಿ.ರವೀಂದ್ರ ಜೆಡಿಎಸ್‌ನ ಉಸ್ತುವಾರಿ ಹೊರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more