ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಕಾರ್ಡ್‌! ಮೀಟರ್‌ ಉದ್ದ ಜೇನು; ಲೀಟರುಗಟ್ಟಲೆ ತುಪ್ಪ!

By * ಆರ್‌.ಶರ್ಮಾ, ತಲವಾಟ (ಸಾಗರ)
|
Google Oneindia Kannada News

Meter long Beehive
ಏಪ್ರಿಲ್‌- ಮೇ ತಿಂಗಳು ಎಂದರೆ ಮಲೆನಾಡಿನ ಕಾಡಿನಲ್ಲಿ ಜೇನು ಹುಟ್ಟು ಕೀಳುವವರಿಗೆ ಸುಗ್ಗಿಯ ಕಾಲ. ಬೆಳಗ್ಗೆ ಮುಂಚೆ ಜೇನು ಕೀಳಲು ಹೊರಟರೆಂದರೆ ಮಧ್ಯಾಹ್ನ ಮನೆ ಸೇರುವ ಹೊತ್ತಿಗೆ ಸೇರುಗಟ್ಟಲೆ ತುಪ್ಪ ಮನೆಗೆ ಖಂಡಿತ.

ತುಡುವೆ ಜೇನಿನ ಶ್ರಮವನ್ನು ಬಸಿದುಕೊಳ್ಳುವ ಮನುಷ್ಯ ಜೇನು ಹುಟ್ಟಿಗೆ ಕೈ ಹಾಕಿ ಬಹಳ ಕಾಲವಾಯಿತು. ಜೇನುಗಳಲ್ಲಿ ಹೆಜ್ಜೇನುನಿಸರಿ ಕೋಲ್ಜೇನು ಮುಂತಾದವುಗಳಿದ್ದರೂ ತುಡುವೆ ಜೇನು ಮಾತ್ರ, ಜೇನುಹುಚ್ಚಿನವರಿಗೆ ಅತ್ಯಂತ ಪ್ರಿಯವಾದದ್ದು.

ಕಾಡಿನ ಮರದಲ್ಲಿ ಹಾಗೂ ಹುತ್ತಗಳಲ್ಲಿ ಇವು ವಾಸಿಸುತ್ತವೆ. ಸಾಮಾನ್ಯವಾಗಿ ಮುಕ್ಕಾಲು ಅಡಿ ಅಗಲ ಮುಕ್ಕಾಲು ಅಡಿ ಉದ್ದ ತತ್ತಿಗಳನ್ನು(ರೊಟ್ಟು) ಗೂಡಿನ ಗಾತ್ರದ ಅನುಗುಣವಾಗಿ ಕಟ್ಟಿಕೊಂಡಿರುತ್ತವೆ. ಆದರೆ ಸಿದ್ದಾಪುರ ತಾಲ್ಲೂಕು ಕಲಗಾರು ಮಂಜುನಾಥರವರಿಗೆ ಸಿಕ್ಕ ಈ ತುಡುವೇ ಜೇನು ಅನಾಮತ್ತು ಅರ್ಧ ಅಡಿ ಅಗಲ ಮೂರಡಿ ಉದ್ದ(ಒಂದು ಮೀಟರ್‌) ತತ್ತಿ ಕಟ್ಟಿತ್ತು.

ಬಹುಶಃ ದಾಖಲೆಯ ಇಂದಿನ ದಿನಗಳಲ್ಲಿ ಜೇನು ತಾನೂ ಏನು ಕಡಿಮೆ ಎಂದು ಗಿನ್ನೀಸ್‌ ದಾಖಲೆಯನ್ನು ಸೇರಲು ಹೊರಟಿತ್ತೇನೋ. ಏನಾದರಾಗಲಿ ಅಪರೂಪಕ್ಕೆ ಸಿಗುವ ಇಷ್ಟುದ್ದ ತತ್ತಿಯ ಜೇನು ಕೇವಲ ಬಾಯಿ ಸಿಹಿ ಮಾಡುವುದರ ಜೊತೆಗೆ ನೋಡುಗರ ಕಣ್ಣಿಗೂ ಅಬ್ಬಾ ಎಂಬ ಆಶ್ಚರ್ಯಕರ ತಂಪನ್ನು ನೀಡಿದ್ದು ನಿಜ.

;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X