• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ಸೈಟು ಕೊಳ್ಳೋದು ಇನ್ಮುಂದೆ ಕಷ್ಟ... ಕಷ್ಟ !

By Staff
|


ಬೆಂಗಳೂರು : ನಗರದಲ್ಲಿ ಇನ್ನು ಮುಂದೆ ಸ್ಥಿರಾಸ್ತಿ ದರ ಶೇಕಡಾ 15ರಿಂದ 60ರವರೆಗೆ ಏರಿಕೆಯಾಗಲಿದ್ದು, ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಗುರುವಾರದಿಂದಲೇ ಜಾರಿಗೆ ಬರಲಿದೆ.

ನಗರ ಜಿಲ್ಲಾ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ನಿವೇಶನ ಕೊಳ್ಳುವ ಮಧ್ಯಮ ವರ್ಗದ ಜನರ ಕನಸು ಇನ್ನೂ ದುಬಾರಿಯಾದಂತಾಗಿದೆ. ಇದಲ್ಲದೆ ಅಪಾರ್ಟ್‌ಮೆಂಟುಗಳಲ್ಲಿನ ಕಾರು ಪಾರ್ಕಿಂಗ್‌ ಸ್ಥಳಕ್ಕೂ 50ರಿಂದ 70ಸಾವಿರ ರೂಪಾಯಿ ನೀಡಬೇಕಾಗುತ್ತದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ, ಬಿಡಿಎ ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಬಡಾವಣೆಗಳ ವಾಣಿಜ್ಯ ನಿವೇಶನಗಳಿಗೆ, ಆಯಾ ಪ್ರದೇಶದ ವಾಸೋಪಯೋಗಿ ನಿವೇಶನಗಳ ದರದ ಶೇಕಡಾ 40ರಷ್ಟು ಹೆಚ್ಚಿನ ದರ ನಿಗದಿಪಡಿಸಲಾಗಿದೆ.

ಯಾವ್ಯಾವ ಪ್ರದೇಶದಲ್ಲಿ ಎಷ್ಟೆಷ್ಟು ದರ...?(ಪ್ರತಿ ಚದರಡಿಗೆ ರೂಪಾಯಿ) :

ಕೆಂಪೇಗೌಡ ರಸ್ತೆ - 10,000
ಬ್ರಿಗೇಡ್‌ ರಸ್ತೆ - 8,000
ಟ್ರಿನಿಟಿ ವೃತ್ತ - 8,000
ರೆಸಿಡೆನ್ಸಿ ರಸ್ತೆ - 7,000
ಕನ್ನಿಂಗ್‌ಹ್ಯಾಂ ರಸ್ತೆ - 6,000
ಗಾಂಧೀಬಜಾರ್‌ - 4,500
ಗಾಂಧೀನಗರ - 4,000-7,000
ಮಲ್ಲೇಶ್ವರ - 3,000-5,000
ಬಳ್ಳಾರಿ ರಸ್ತೆ - 3,800
ಮಾಗಡಿ ರಸ್ತೆ - 2,300-3,200
ವಸಂತನಗರ - 2,000-4,000
ಸಿಲ್ಕ್‌ಫಾರ್ಮ್‌ ಸುತ್ತ - 1,000-4,000
ಬನ್ನೇರುಘಟ್ಟ ರಸ್ತೆ - 2,000-4,000
ಜಯನಗರ - 2,000-4,000
ಕೋರಮಂಗಲ ಕೈಗಾರಿಕಾ ಪ್ರದೇಶ - 2,310
ನಾಗರಬಾವಿ ರಿಂಗ್‌ ರಸ್ತೆ- 1,750
ಹೆಬ್ಬಾಳ - 1,750
ಕಮಲಾನಗರ - 1,400
ಜಾಲಹಳ್ಳಿ - 1,100
ಪೀಣ್ಯ ಕೈಗಾರಿಕಾ ಪ್ರದೇಶ - 850

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more