ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಜೀನಿಯಾ ನರಮೇಧದಲ್ಲಿ ಭಾರತದ ಪ್ರೊಫೆಸರ್‌ ಬಲಿ

By Staff
|
Google Oneindia Kannada News

ನವದೆಹಲಿ : ಅಮೆರಿಕಾದ ವರ್ಜೀನಿಯಾ ವಿವಿ ಕ್ಯಾಂಪಸ್‌ನಲ್ಲಿನ ದುರ್ಘಟನೆಯಲ್ಲಿ ಮೃತಪಟ್ಟವರಲ್ಲಿ ಭಾರತೀಯರು ಇದ್ದಾರೆ ಎಂಬ ಅಂಶ ಮಂಗಳವಾರ ಬೆಳಕಿಗೆ ಬಂದಿದೆ.

ವರ್ಜೀನಿಯಾ ಟೆಕ್‌ ವಿಶ್ವವಿದ್ಯಾಲಯಕ್ಕೆ ನುಗ್ಗಿದ ಇಬ್ಬರು ಅಪರಿಚಿತ ಬಂದೂಕುಧಾರಿಗಳು, ಮನಬಂದಂತೆ ಗುಂಡು ಹಾರಿಸಿ, ಸೋಮವಾರ ರಕ್ತದ ಕೋಡಿ ಹರಿಸಿದ್ದರು. ಈ ಘಟನೆಯಲ್ಲಿ ಸಾವಿನ ಸಂಖ್ಯೆ 33ತಲುಪಿದೆ. ಈ ಘಟನೆಯಿಂದ ಅಮೆರಿಕ ತಲ್ಲಣಗೊಂಡಿದೆ.

ಕ್ಯಾಂಪಸ್‌ನಲ್ಲಿದ್ದ ಭಾರತ ಮೂಲದ ಪ್ರೊ. ಜಿ.ವಿ. ಲೋಕನಾಥನ್‌ ಸಾವನ್ನಪ್ಪಿದ್ದಾರೆ ಎಂಬ ಸಂಗತಿಯನ್ನು ಅವರ ಸಹೋದ್ಯೋಗಿ ಪ್ರೊ. ರಾಮನ್‌ ಕುಮಾರ್‌ ಖಚಿತಪಡಿಸಿದ್ದಾರೆ.

ಮತ್ತೊಂದು ಕಡೆ ಮುಂಬೈನ 26ವರ್ಷದ ವಿದ್ಯಾರ್ಥಿ ಮಿನಾಲ್‌ ಪಂಚಾಲ್‌ ತಪ್ಪಿಸಿಕೊಂಡಿದ್ದಾನೆ. ಆತನ ಸ್ನೇಹಿತರು ಪೋನ್‌ ಮೂಲಕ ಸಂಪರ್ಕಿಸಲು ಯತ್ನಿಸುತ್ತಿದ್ದು, ಯಾವುದೇ ಪ್ರತಿಸ್ಪಂದನ ಸಿಗುತ್ತಿಲ್ಲ ಎನ್ನಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X