ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘...ಹೂವೇ’ನಾಯಕ ವಿನಾಯಕ ಜೋಶಿಗೆ ಪಿತೃವಿಯೋಗ

By Staff
|
Google Oneindia Kannada News

ಬೆಂಗಳೂರು : ನಟ ವಿನಾಯಕ ಜೋಶಿ ಅವರ ತಂದೆ ವಾಸುದೇವ ಜೋಶಿ(52) ಭಾನುವಾರ(ಏಪ್ರಿಲ್‌ 15) ಮಧ್ಯಾಹ್ನ ಮೃತರಾದರು. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಕೆ.ಆರ್‌. ಆಸ್ಪತ್ರೆಗೆ ಸೇರಿಸಲಾಗಿತ್ತು.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ವಾಸುದೇವ ಜೋಶಿ ಅವರ ಎರಡು ಮೂತ್ರಪಿಂಡಗಳು ವೈಫಲ್ಯಗೊಂಡಿದ್ದವು. ಅವರನ್ನು ಕಳೆದ ವಾರದಿಂದ ತೀವ್ರನಿಗಾಘಟಕದಲ್ಲಿ ಇಡಲಾಗಿತ್ತು. ಭಾನುವಾರ ಮಧ್ನಾಹ್ನ ಆಸ್ಪತ್ರೆಯಿಂದ ಮನೆಗೆ ಹಿಂದುರಿಗಿದ ಕೆಲ ಸಮಯದಲ್ಲೇ ಅವರು ಕತ್ರಿಗುಪ್ಪೆಯ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಮೃತರು ಮಗ ವಿನಾಯಕ ಜೋಶಿ ಸೇರಿದಂತೆ, ಪತ್ನಿ ಬಿ.ಎಸ್‌. ಅನ್ನಪೂರ್ಣ ಅವರನ್ನು ಆಗಲಿದ್ದಾರೆ. ವಾಸುದೇವ ಜೋಶಿಯವರು ತಮ್ಮ ಮಗನನ್ನು ನಾಯಕನಾಗಿ ಮಾಡಬೇಕೆಂಬ ಮಹದಾಸೆಯಿಂದ ನನ್ನ ಕನಸಿನ ಹೂವೇ ಚಿತ್ರವನ್ನು ನಿರ್ಮಿಸಿ ಯಶ ಕಾಣದೆ ಹತಾಶರಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಬನಶಂಕರಿಯ ಚಿತಾಗಾರದಲ್ಲಿ ಭಾನುವಾರ ಸಂಜೆ ನೆರವೇರಿಸಲಾಯಿತು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X