• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಕಲ್ಯಾಣ: ಬೆಂಗಳೂರಿನಲ್ಲಿ 10ದಿನಗಳ ಸೋಮಯಾಗ

By Staff
|


ಶ್ರೌತ ಪ್ರತಿಷ್ಠಾನವು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 2007 ಏಪ್ರಿಲ್‌ 17ರಿಂದ 26 ರವರೆಗೆ ಶತಮಾನದ ಅಪರೂಪದ ಆಪ್ತೋರ್ಯಾಮ ಸೋಮಯಾಗವನ್ನು ಏರ್ಪಡಿಸಿದೆ. ಈ ಬಗ್ಗೆ ಪ್ರತಿಷ್ಠಾನ ನೀಡಿರುವ ವಿವರಗಳು ಇಲ್ಲಿವೆ.

ಶ್ರೌತ ಪ್ರತಿಷ್ಠಾನ ಸಂಯೋಜಿಸಿರುವ ಈ ಯಾಗವು 10 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಆಧುನಿಕ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರುವ ಸಂಸ್ಥೆಯ ಪ್ರಯತ್ನವು ಅತ್ಯಂತ ಶ್ಲಾಘನೀಯ. ಇದರಿಂದ ನಮ್ಮ ಸನಾತನ ಧರ್ಮಗ್ರಂಥಗಳಲ್ಲಿ ಪ್ರತಿಪಾದಿಸಿರುವ ಸಂಗತಿಗಳು ಹೆಚ್ಚು ಪ್ರಸ್ತುತವಾಗಲು ನೆರವಾಗುವುದು.

ಸೋಮಯಾಗ, ಹೆಸರೇ ಸೂಚಿಸುವಂತೆ ಸೋಮರಸವೇ ಪ್ರಧಾನ ಹವಿಸ್ಸು. ವಿಶ್ವಕಲ್ಯಾಣ ಇದರ ಮೂಲ ಉದ್ದೇಶ. ಸೋಮ ಎಂದರೆ ಚಂದ್ರ, ಅಂದರೆ ಮನಸ್ಸಿನ ದೇವತೆ, ಮನೋವಿಜ್ಞಾನಿಗಳಿಗೆ ಇದು ಒಂದು ಒಳ್ಳೆ ತಾಲೀಮು. ಸೋಮಲತೆಯ ಶಕ್ತಿಯನ್ನು ಪೂರ್ಣಹುತಿಯಲ್ಲಿ ಹವಿಸ್ಸಿನಿಂದ ಉಂಟಾಗುವ ಅಗ್ನಿ ಜ್ವಾಲೆಗಳೇ ಪ್ರತಿಪಾದಿಸುತ್ತದೆ. ಯಂತ್ರ, ತಂತ್ರ, ಮಂತ್ರದಿಂದ ನಡೆಯುವ ಈ ಯಾಗವು ಬೆಂಗಳೂರಿನ ಜನತೆಗೆ ಕಂಡರಿಯದ ಅನುಭವವನ್ನು ತಂದುಕೊಡುವುದರಲ್ಲಿ ಆಶ್ಚರ್ಯವಿಲ್ಲ.

ಪ್ರಾಚೀನ ಪರಂಪರೆಯಿಂದಲೂ ಮಂತ್ರ, ಯಂತ್ರ, ತಂತ್ರಗಳಿಂದ ಕೂಡಿದ ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಕ್ರಿಯಾ ಶಕ್ತಿಗಳು ಸಮಾಜದ ಸೌಖ್ಯಕ್ಕೆ ಫಲ ನೀಡುವ ಅಪರೂಪದ ಯಾಗವನ್ನು ನೆರವೇರಿಸಲು ಇಂದು ಬೆರಳೆಣಿಕೆಯಷ್ಟೆ ಅಗ್ನಿ ಹೋತ್ರಿಗಳು ಉಳಿದಿದ್ದಾರೆ. ಪ್ರಾಚೀನ ಪರಂಪರೆಯನ್ನು ಒಂದು ಕಡೆ ಉಳಿಸುವ ಕೆಲಸವಾದರೆ, ಇನ್ನೊಂದು ಕಡೆ ಅಗ್ನಿ ಹೋತ್ರಿಗಳನ್ನು ಗುರುತಿಸಿ ಬೆಳೆಸುವ ಕೆಲಸ ಆಗಬೇಕಿದೆ.

ಇಂತಹ ಯಾಗಗಳು ದೇವ ಮಾನವರ ಸಂಪರ್ಕ ಸೇತುವೆಗಳಾಗಿವೆ. ಈ ನಮ್ಮ ಪುರಾತನ ಆಸ್ತಿಯು ಆಧುನಿಕತೆಯಲ್ಲಿ ಕರಗಿಹೋದರೆ ಸಮಾಜಕ್ಕೆ ತುಂಬಲಾರದ ನಷ್ಟ ಸಂಭವಿಸುವುದರಲ್ಲಿ ಅನುಮಾನವೇ ಬೇಡ. ಹವಿಸ್ಸು ಸೂರ್ಯನನ್ನು ಸೇರಿ ಮಳೆಯಾಗಿ ಭೂಮಿಗೆ ಬಿದ್ದು, ಬೆಳೆಯಾಗಿ ಮೇಲೆದ್ದು ಆಹಾರ ನೀಡಿ ಜೀವರಾಶಿಗಳು ಅಭಿವೃದ್ದಿಯಾಗುತ್ತವೆ. ದೇವಮಾನವರ ಸಂಬಂಧ ಬಲವಾಗುತ್ತದೆ.

ಸೋಮರಸದ ಹವಿಸ್ಸಿನಿಂದ ಚಿಮ್ಮುವ ಬೆಂಕಿಯ ಜ್ವಾಲೆಗಳು ಜ್ಞಾನದ ಸಂಕೇತವೋ ಎಂಬಂತೇ ಗಗನವನ್ನು ಸೇರುವುದು. ಅಂತೆಯೇ, ತಂಪು ಮತ್ತು ಸುಭೀಕ್ಷೆಯನ್ನು ಸಕಲ ಜೀವರಾಶಿಗಳಿಗೂ ತಂದುಕೊಡುವುದು.

ಇಂತಹ ವೇದೋಕ್ತವಾದ ಯಾಗ ಯಜ್ಞಾದಿಗಳನ್ನು ಹಿಂದೆ ರಾಜಮಹಾರಾಜರು ನಡೆಸುತ್ತಿದ್ದರು. ಈಗ ಪ್ರಜೆಗಳೆ ರಾಜರಾಗಿರುವುದರಿಂದ ಪ್ರತಿಯಾಬ್ಬ ನಾಗರೀಕರು ಇಂತಹ ವೈಜ್ಞಾನಿಕ ಮತ್ತು ಪಾರಮಾರ್ಥಿಕ ಯಾಗಗಳಿಗೆ ತಮ್ಮ ಪಾಲಿನ ಹವಿಸ್ಸನ್ನು ಸಕ್ರಿಯವಾಗಿ ಭಾಗವಹಿಸಿ, ತನು, ಮನಗಳನ್ನು ಧಾರೆಯೆರೆದು ಕೊಡುವ ಮೂಲಕ ಮುಂದಿನ ಪೀಳಿಗೆಗೆ ರಕ್ಷಿಸಬಹುದಾಗಿದೆ.

ಆಸಕ್ತರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ : 26761057/26768866/9448190414/9886027827/9886570796

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more