ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಗಾಳಿ : ಇನ್ಫೋಸಿಸ್‌ ಹೊಸ ಸಿಇಓ ಗೋಪಾಲಕೃಷ್ಣನ್‌

By Staff
|
Google Oneindia Kannada News

Nandan nilekani steps down as Infosys CEOಬೆಂಗಳೂರು : ಇನ್ಫೋಸಿಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ(ಸಿಇಓ) ಸ್ಥಾನವನ್ನು ನಂದನ್‌ ನಿಲೇಕಣಿ, ಈಗಿನ ಸಿಓಓ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್‌ ಗೋಪಾಲಕೃಷ್ಣನ್‌ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.

ಇನ್ಫೋಸಿಸ್‌ ಸಂಸ್ಥೆಯ ತ್ರೆೃಮಾಸಿಕ ವರದಿ ಪ್ರಕಟಗೊಂಡ ಮರುದಿನವೇ ನಂದನ್‌ ನಿಲೇಕಣಿ ಅವರು ತೆಗೆದುಕೊಂಡ ಈ ನಿರ್ಣಯ, ಹಲವರಿಗೆ ಅಚ್ಚರಿ ಉಂಟು ಮಾಡಿದೆ.

ಆದರೆ ಮುಖ್ಯಸ್ಥಾನವನ್ನು ಇತರರಿಗೆ ಬಿಟ್ಟುಕೊಡುವುದು ಇನ್ಫೋಸಿಸ್‌ನಲ್ಲಿ ಹೊಸತೇನಲ್ಲ. 2002ರಲ್ಲಿ ನಾರಾಯಣ ಮೂರ್ತಿ ಅವರು ಸಿಇಓ ಸ್ಥಾನವನ್ನು ನೀಲಕೇಣಿ ಅವರಿಗೆ ನೀಡಿದ್ದರು. ನಂತರ ಮುಖ್ಯ ಹಣಕಾಸುಅಧಿಕಾರಿ(ಸಿಎಫ್‌ಓ) ಸ್ಥಾನದಲ್ಲಿದ್ದ ಮೋಹನ್‌ದಾಸ್‌ ಪೈ ಅವರ ಸ್ಥಾನಕ್ಕೆ ವಿ ಬಾಲಕೃಷ್ಣನ್‌ ನೇಮಕವಾದರು.

52 ವರ್ಷ ವಯಸ್ಸಿನ ನಂದನ್‌ ನಿಲೇಕಣಿ ಈಗ ಸಹ ಅಧ್ಯಕ್ಷರಾಗಿ ನಿರ್ದೇಶಕರ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

‘‘ರಾಜವಂಶಗಳ ಈ ದೇಶದಲ್ಲಿ ಕಿತ್ತು ಹಾಕುವವರೆಗೂ ಕುರ್ಚಿಗೆ ಅಂಟಿಕೊಳ್ಳುವವರೇ ಹೆಚ್ಚು. ಇಲ್ಲಿಂದಲೇ ನಾವು ಜಗತ್ತಿಗೆ, ಕಂಪನಿಗಳನ್ನು ಬೆಳೆಸುವ ಮತ್ತು ನಾಯಕತ್ವ ಸೃಷ್ಟಿಸುವ ಹೊಸದಾರಿಯನ್ನು ತೋರುತ್ತೇವೆ’’ ಎಂದು ನಂದನ್‌ ನಿಲೇಕಣಿ ಹೇಳಿಕೆ ನೀಡಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X