• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾರಾಯಣಮೂರ್ತಿ ಮಾತಲ್ಲಿ ತಪ್ಪಿಲ್ಲ -ಎಸ್‌.ಎಲ್‌.ಭೈರಪ್ಪ

By Staff
|


I stand by Infosys Narayana Murthy : S.L. Bhyrappaಬೆಂಗಳೂರು : ರಾಷ್ಟ್ರಗೀತೆ ವಿವಾದಕ್ಕೆ ಸಂಬಂಧಿಸಿದಂತೆ, ಇನ್ಫೋಸಿಸ್‌ ನಾರಾಯಣಮೂರ್ತಿ ಅವರನ್ನು ಸಾಹಿತಿ ಎಸ್‌.ಎಲ್‌.ಭೈರಪ್ಪ ಬೆಂಬಲಿಸಿದ್ದಾರೆ.

ಪತ್ರಿಕೆಯಾಂದಕ್ಕೆ ಸಂದರ್ಶನ ನೀಡಿರುವ ಅವರು, ನಾರಾಯಣಮೂರ್ತಿ ಹೇಳಿಕೆ ಮತ್ತು ವರ್ತನೆಯಲ್ಲಿ ಯಾವುದೇ ಲೋಪವಿಲ್ಲ. ಗಡಿಪಾರು ಮಾಡಬೇಕೆಂಬ ಶಾಸಕರ ವಾದದಲ್ಲಿ ಹುರುಳಿಲ್ಲ. ರಾಜಕಾರಣಿಗಳಿಗೆ ನಾರಾಯಣಮೂರ್ತಿ ಬಗ್ಗೆ ಹೊಟ್ಟೆ ಕಿಚ್ಚಿದೆ ಎಂದರು.

ಒಟ್ಟಾರೇ ಭೈರಪ್ಪ ಹೇಳಿದ್ದು ಇಷ್ಟು :

  • ವಾದ್ಯಗಳಲ್ಲಿ ರಾಷ್ಟ್ರಗೀತೆ ನುಡಿಸುವುದು ಅಪರಾಧವೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಲಾಗಿಲ್ಲ.
  • ಮೂರ್ತಿ ಅವರಿಗೆ ವಾಕ್‌ ಸ್ವಾತಂತ್ರ್ಯವಿದೆ. ರಾಜಕಾರಣಿಗಳು ಹೇಳುವ ರೀತಿ, ಗಡಿಪಾರು ಮಾಡುವಷ್ಟು ದೊಡ್ಡ ತಪ್ಪನ್ನು ಅವರು ಮಾಡಿಲ್ಲ.
  • ದೇಶಕ್ಕೆ ಪ್ರತಿಷ್ಠೆ ತಂದುಕೊಟ್ಟ ಮೂರ್ತಿ ಅವರಿಂದ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಸಿಕ್ಕಿದೆ.
  • ಸ್ಥಳೀಯರಿಗೆ ಇನ್ಫೋಸಿಸ್‌ನಲ್ಲಿ ಅವಕಾಶ ನೀಡಿ ಎಂಬುದು ಕೆಲವರ ಒತ್ತಾಯ. ಆದರೆ ಅರ್ಹರು ಸ್ಥಳೀಯರಲ್ಲಿ ಎಷ್ಟು ಮಂದಿ ಸಿಗುತ್ತಾರೆ?
  • ರೈತರು ಕೊಡುವ ಕಂದಾಯದಿಂದ, ದೇಶ ನಡೆಯುವುದಿಲ್ಲ. ಕೈಗಾರಿಕೋದ್ಯಮಿಗಳು ಪಾಪದ ಹಣ ಸಂಗ್ರಹಿಸುತ್ತಾರೆ ಎಂಬುದು ಪೂರ್ವಾಗ್ರಹ ಪೀಡಿತರ ಅಭಿಪ್ರಾಯ.
  • ಕಾವೇರಿ ಚಳವಳಿಗೆ ಸಂಬಂಧಿಸಿದ ನಾರಾಯಣಮೂರ್ತಿ ಹೇಳಿಕೆ ಸರಿಯಾಗಿದೆ. ಬಸ್ಸು-ಕಾರು ಸುಟ್ಟರೇ, ಕಾವೇರಿ ಸಮಸ್ಯೆ ಇತ್ಯರ್ಥವಾಗದು.
  • ನಾರಾಯಣಮೂರ್ತಿ ವಿರುದ್ಧ ದೂರು : ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಇನ್ಫೋಸಿಸ್‌ ನಾರಾಯಣಮೂರ್ತಿ ವಿರುದ್ಧ ನಗರದ ವಕೀಲರೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more