ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್‌ಎಸ್‌ಆರ್‌ ಲೇಔಟ್‌ಗೆ ಇನ್ನು ಪ್ರವಾಹದ ಭಯವಿಲ್ಲ!

By Staff
|
Google Oneindia Kannada News

ಬೆಂಗಳೂರು : ಮಳೆಗಾಲ ಬಂತೆಂದರೆ ಕೊಳಚೆ ಮೊರಿಯ ಪ್ರವಾಹದಿಂದ ಹೊಸೂರು-ಸರ್ಜಾಪುರ ರಸ್ತೆಯ(ಹೆಚ್‌ಎಸ್‌ಆರ್‌ ಲೇಔಟ್‌) ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದರು.

ಮಳೆಗಾಲದ ದಿನಗಳಲ್ಲಿ ಆ ಭಾಗ ದ್ವೀಪವಾಗಿ ಪರಿವರ್ತಿತವಾಗುತ್ತಿತ್ತು. ಕೊನೆಗೂ ಈ ಸಮಸ್ಯೆಗೆ ತೆರೆಎಳೆಯುವ ಪ್ರಯತ್ನ ನಡೆದಿದೆ.

ಅಗರ ಕೆರೆ ಕಡೆಗೆ ಸುಮಾರು 135 ಕ್ಯೂಸೆಕ್ಸ್‌ ಚರಂಡಿ ನೀರನ್ನು ಒಯ್ಯುವ ದೊಡ್ಡ ಮೋರಿಗೆ, ಸುರಕ್ಷಿತವಾದ ಸೇತುವೆಯನ್ನು 14 ನೇ ಮುಖ್ಯರಸ್ತೆ ಹಾಗು ಅಗರ ಕೆರೆ ಜಂಕ್ಷನ್‌ ಬಳಿ ನಿರ್ಮಿಸಲಾಗಿದೆ, ಚರಂಡಿಯ ಒಳ-ಹೊರ ಹರಿವುಗಳನ್ನು ನವೀಕರಣ ಮಾಡಲಾಗಿದೆ.

ಈ ಭಾಗದ ಜನರಿಗೆ ಬಿಡಿಎ ನೀಡಿದ್ದ ಭರವಸೆಯನ್ನು ತಡವಾಗಿಯಾದರೂ ನಿಜವಾಗಿಸಿದೆ ಎಂದು ಬುಧವಾರ (ಏಪ್ರಿಲ್‌ 11) ಸೇತುವೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಹೆಚ್‌. ಡಿ .ಕುಮಾರ ಸ್ವಾಮಿ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಇಲ್ಲಿನ ಜನರು ಮಳೆ ಪ್ರವಾಹದ ಭೀತಿಯಿಂದ ಕಂಗೆಟ್ಟಿದ್ದರು, ದೊಡ್ಡ ಚರಂಡಿ ಸೇರಿದಂತೆ ಮಡಿವಾಳ ಕೆರೆ, ಅಗರ ಕೆರೆ, ಬೇಗೂರು , ಹುಳಿಮಾವು ಮುಂತಾದ ಕೆರೆಗಳು ತುಂಬಿ, ಎಲ್ಲೆಡೆ ಹರಿದು ವಿಪ್ರೋ ಸೇರಿದಂತೆ ಹಲವು ಐಟಿ ಕಂಪೆನಿಗಳ ನಿದ್ದೆಗೆಡಿಸಿದ್ದವು.

ಸುಮಾರು 7 ಸೆಕ್ಟರ್‌ಗಳಲ್ಲಿ ಇರುವ ಹೆಚ್‌ಎಸ್‌ಎಆರ್‌ ಬಡಾವಣೆಯಲ್ಲಿ ಅನೇಕ ಕಿರುತೆರೆ-ಹಿರಿತೆರೆ ಕಲಾವಿದರು, ಲೇಖಕರು ಹಾಗೂ ಸಾಫ್ಟ್‌ ವೇರ್‌ ಇಂಜಿನೀಯರ್‌ಗಳೆ ತುಂಬಿದ್ದಾರೆ. ಸುಮಾರು 9 ಸಾವಿರಕ್ಕೂ ಅಧಿಕ ನಾಗರೀಕರು ಇಲ್ಲಿ ವಾಸವಾಗಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X