ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗೂಗಲ್‌’ಗೆ ಸ್ಪರ್ಧೆಯಾಡ್ಡಲು ವಿಕಿಪೀಡಿಯಾ ಯೋಜನೆ

By Staff
|
Google Oneindia Kannada News

ಚೆನ್ನೈ : ಅಂತರ್ಜಾಲ ವಿಶ್ವಕೋಶ ‘ವಿಕಿಪೀಡಿಯಾ’ ಸರ್ಚ್‌ ಇಂಜಿನ್‌ ಆರಂಭಿಸಲು ಯೋಜಿಸಿದ್ದು, ಇದರ ಹಿಂದೆ ಗೂಗಲ್‌ಗೆ ಸ್ಪರ್ಧೆಯಾಡ್ಡುವ ಉದ್ದೇಶ ಅಡಗಿದೆ ಎಂದು ಬಣ್ಣಿಸಲಾಗಿದೆ.

ವಿಕಿಪೀಡಿಯಾದ ಉಪ ಸಂಪಾದಕ ಹಾಗೂ ಖ್ಯಾತ ಬ್ಲಾಗರ್‌ ಕಿರುಬಾ ಶಂಕರ್‌ ಈ ಕುರಿತು ಮಾತನಾಡುತ್ತಾ, ‘ವಿಕಿಮೀಡಿಯಾ ಪ್ರತಿಷ್ಠಾನ’ ಸರ್ಚ್‌ ಇಂಜಿನ್‌ ಆರಂಭಿಸುವ ಯೋಜನೆಯಲ್ಲಿದ್ದು, ಅದಿನ್ನೂ ಆರಂಭದ ಹಂತದಲ್ಲಿದೆ. ವಿಕಿಪೀಡಿಯಾವನ್ನು ಜನರ ಸಮೀಪ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಚ್‌ ಇಂಜಿನ್‌ ಆರಂಭಿಸಲಾಗುವುದು ಎಂದು ತಿಳಿಸಿದರು.

ವೆಬ್‌ ಡೆವಲಪ್‌ಮೆಂಟ್‌ ಸಂಸ್ಥೆಯಾಂದನ್ನು ನಡೆಸುತ್ತಿರುವ ಅವರು, ಇತ್ತೀಚೆಗೆ ನಡೆದ ವಿಕಿಕ್ಯಾಂಪ್‌-ಅನ್‌ಕಾನ್‌ಫರನ್ಸ್‌ನ ಸಂಘಟನೆಕಾರರಾಗಿಯೂ ಕೆಲಸ ಮಾಡಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X