ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ಮೂಡಾ ಸೈಟುಕೊಳ್ಳುವ ಮುನ್ನ ನಿಗಾವಹಿಸಿ!

By Staff
|
Google Oneindia Kannada News

ಮೈಸೂರು : ಎಲ್ಲರಿಗೂ ಕನಿಷ್ಠ 30-40 ಅಳತೆಯ ನಿವೇಶನ ಖರೀದಿಸುವ ಆಸೆ ಇದ್ದೇ ಇರುತ್ತದೆ. ಆದರೆ ನಿವೇಶನ ಖರೀದಿಸುವಾಗ ಎಷ್ಟು ನಿಗಾವಹಿಸಿದರೂ ಕಡಿಮೆಯೇ ಸರಿ. ಕಾರಣ -ನಕಲಿ ದಾಖಲೆಗಳ ತಯಾರಿಸಿ, ವಂಚಿಸುವವರ ಸಂಖ್ಯೆ ದೊಡ್ಡದು!

ಇಂತಹ ವಂಚನೆಯಾಂದು ಮೈಸೂರಿನಲ್ಲಿ ವರದಿಯಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದ ನಿವೇಶನ ಮಾರಾಟ ಮಾಡಿದ ಆರೋಪದ ಮೇಲೆ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್‌ ಹಾಗೂ ಎಂ.ಪಿ.ನಾಗರತ್ನಾ ಎಂಬುವವರು ಬಂಧಿತರು. ಇವರು ಕುಮಾರ್‌ ಎಂಬ ವ್ಯಕ್ತಿಗೆ ನಕಲಿ ದಾಖಲೆ ಸೃಷ್ಟಿಸಿ, 30ಲಕ್ಷ ರೂಪಾಯಿಗಳಿಗೆ ನಿವೇಶನ ಮಾರಿದ್ದರು. ಅಲ್ಲದೆ 20ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಡೆದಿದ್ದರು.

ಸ್ಥಳ ಹಾಗೂ ನಿವೇಶನದ ಸಂಖ್ಯೆ ಬಗ್ಗೆ ಸ್ಪಷ್ಟಪಡಿಸಿಕೊಳ್ಳುವ ನಿಮಿತ್ತ ಕುಮಾರ್‌ ಮೂಡಾಗೆ ಭೇಟಿ ನೀಡಿದಾಗ, ವಂಚನೆ ಬಯಲಾಗಿದೆ. ದಾಖಲೆ ಪತ್ರಗಳು ನಕಲಿ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ, ಆನಂತರ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X