ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 23ರಿಂದ ಸಾಗರದಲ್ಲಿ ‘ಮಿಡಿಮಾವು ಉತ್ಸವ-07’

By Staff
|
Google Oneindia Kannada News

ಶಿವಮೊಗ್ಗ : ಸಾಗರದಲ್ಲಿ ಏಪ್ರಿಲ್‌ 23ರಿಂದ 25ರವರೆಗೆ ಮಿಡಿಮಾವು ಉತ್ಸವ-07ನಡೆಯಲಿದೆ.

ಉತ್ಸವದಲ್ಲಿ ಸುಮಾರು 700 ಬಗೆಯ ಮಿಡಿಮಾವುಗಳು ಪ್ರದರ್ಶನಗೊಳ್ಳಲಿದ್ದು, ಸ್ವಲ್ಪಮಟ್ಟಿಗೆ ಮಿಡಿಮಾವುಗಳ ಮಾರಾಟ ಕೂಡ ನಡೆಯಲಿದೆ. ಮಿಡಿಮಾವು ವೈವಿಧ್ಯ ಕಾಪಾಡುವ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲು ಉತ್ಸವ ನಡೆಸಲಾಗುತ್ತಿದೆ.

ಮಲೆನಾಡು ಹಾಗೂ ಕರಾವಳಿಗಳಲ್ಲಿ ಮಿಡಿಮಾವು ‘ಅಪ್ಪೆಮಿಡಿ’ ಎಂದೇ ಪ್ರಸಿದ್ಧ. ಮಾವು ಎಂದ ತಕ್ಷಣ ಮಾವಿನ ಹಣ್ಣು ಎಂದೇ ಬಹಳ ಜನ ತಿಳಿದಿದ್ದಾರೆ. ಆದರೆ ಉಪ್ಪಿನಕಾಯಿಗಾಗೇ ಇರುವ ಅಪ್ಪೆಮಿಡಿ ಬಗ್ಗೆ ಅನೇಕರು ತಿಳಿದಿಲ್ಲ. ಅಪ್ಪೆಮಿಡಿ ಹಣ್ಣು ಹುಳಿಯಾಗಿರುತ್ತವೆ. ಆದರೆ ಇವುಗಳ ಉಪ್ಪಿನಕಾಯಿ ಮಾತ್ರ ಬಹಳ ರುಚಿಕರ.

ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಪ್ಪೆಮಿಡಿ ಮರಗಳು ಸಮೃದ್ಧವಾಗಿವೆ. ಆದರೆ ಕೈಗಾರಿಕೀಕರಣ, ಜಲವಿದ್ಯುತ್‌ ಯೋಜನೆಗಳು ಹಾಗೂ ಮರಗಳ ಕಡಿಯುವಿಕೆಯಿಂದಾಗಿ ಕಳೆದ ಆರು ದಶಕಗಳಲ್ಲಿ ಸುಮಾರು ಒಂದು ಲಕ್ಷ ಅಪ್ಪೆಮಿಡಿ ಮರಗಳು ನಾಶಗೊಂಡಿವೆ.

ಸಾಮಾನ್ಯವಾಗಿ ಒಂದು ಮಿಡಿಮಾವು ಒಂದು ರೂಪಾಯಿಗೆ ದೊರೆಯುತ್ತದೆ. ಉತ್ತಮ ತಳಿಯದ್ದಾದರೆ ಎರಡು ರೂಪಾಯಿಗೆ ಸಿಗುತ್ತದೆ. ಕೆಲವು ಪ್ರಸಿದ್ಧ ತಳಿಗಳು ಈಗಾಗಲೇ ನಾಶಗೊಂಡಿವೆ.

ಮೇಳದಲ್ಲಿ ಅಪ್ಪೆಮಿಡಿ ಪಾಕವೈವಿಧ್ಯವೂ ಗಮನ ಸೆಳೆಯಲಿದೆ. ಅಪ್ಪೆಮಿಡಿ ಇತಿಹಾಸ, ಬೆಳೆಗಾರರು-ವಿಳಾಸ, ಸಾಧನೆ ಕುರಿತ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಲಿದೆ. ಉಪ್ಪಿನಕಾಯಿ ಮಾಡುವ ಬಗ್ಗೆ ಸಂವಾದ ಹಾಗೂ ವಿಚಾರವಿನಿಮಯವೂ ನಡೆಯಲಿದ್ದು, ಲಕ್ಷ್ಮೀನಾರಾಯಣ ಹೆಗಡೆ ಮೇಳದ ಅಧ್ಯಕ್ಷತೆ ವಹಿಸಲಿದ್ದಾರೆ.

ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ, ಪತ್ರಕರ್ತ ನಾಗೇಶ್‌ ಹೆಗಡೆ, ನೀರುಕೊಯ್ಲು ತಜ್ಞ ಶ್ರೀಪಡ್ರೆ, ವಿಜಯ ಕರ್ನಾಟಕ ದಿನಪತ್ರಿಕೆ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್‌ ಮೊದಲಾದವರು ಮೇಳದಲ್ಲಿ ಭಾಗವಹಿಸಲಿದ್ದಾರೆ.

ಮೇಳ ನಡೆಯುವ ಸ್ಥಳ :
ಹೆಗಡೆ ಫಾರ್ಮ್‌,
ಭೀಮನಕೋಣೆ ರಸ್ತೆ,
ಸಾಗರ,
ಶಿವಮೊಗ್ಗ ಜಿಲ್ಲೆ

ಆಸಕ್ತರು ಸಂಪರ್ಕಿಸಬಹುದಾದ ದೂರವಾಣಿ : (08183) 229363, 228781, 093437 77984

ಇ-ಮೇಲ್‌ : [email protected]
ವೆಬ್‌ಸೈಟ್‌ : http://www.midimaavu.info/

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X