• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್‌ಕನ್ನಡ 7ನೇ ವಾರ್ಷಿಕೋತ್ಸವ : ಬಿ.ಜಿ. ಮಹೇಶ್‌ ಸಂದೇಶ

By Staff
|

ಭಾರತೀಯ ಭಾಷಾ ಪತ್ರಿಕೋದ್ಯಮದಲ್ಲಿ ನಾವು ನಡೆದುಬಂದ ದಾರಿಯ ಕುಡಿನೋಟ. ಏಳು ಸಂತಸಗಳ ಈ ಕ್ಷಣ ನಿಮಗೆಲ್ಲ ಹೃತ್ಪೂರ್ವಕ ಕೃತಜ್ಞತೆಗಳು.

Anniversary Greetings from B.G. Mahesh, CEOಪ್ರಿಯ ಓದುಗರೇ...

ನಮ್ಮ ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು, ಪೋರ್ಟ್‌ಲ್ಲುಗಳಿಗೆ 2007ರ ಏಪ್ರಿಲ್‌ನಲ್ಲಿ 7 ವರ್ಷಗಳು ತುಂಬುತ್ತಿವೆ.

ಅಂತರ್ಜಾಲದಲ್ಲಿ ನಾಲ್ಕೂ ಭಾಷೆಗಳನ್ನು ಅಭಿಲಾಷೆಯಿಂದ , ಗಂಭೀರವಾಗಿ ತೆಗೆದುಕೊಂಡವರಲ್ಲಿ ನಾವು ಮೊದಲಿಗರು. ನಿಮ್ಮ ಸೇವೆಯಲ್ಲಿ ಶ್ರದ್ಧೆಯಿಂದ ಅನವರತ ತೊಡಗಿಸಿಕೊಂಡಿರುವ ನಮ್ಮ ತಂಡಕ್ಕೆ ಈ ಎಲ್ಲ ಕೀರ್ತಿ ಸಲ್ಲಬೇಕು. ಸಲಹೆ-ಸೂಚನೆಗಳನ್ನೊಳಗೊಂಡ ನಿಮ್ಮ ಇ-ಮೇಲುಗಳು ಸದಾ ನನ್ನನ್ನು ಪ್ರೋತ್ಸಾಹಿಸಿವೆ. ನಿಮ್ಮ ಇತ್ಮಾತ್ಮಕ ವಿಮರ್ಶೆ ನಮ್ಮನ್ನು ನಿಯಮಿತವಾಗಿ ಅಚ್ಚುಕಟ್ಟುಗೊಳಿಸುವಲ್ಲಿ ನೆರವಾಗಿದೆ.

ನಿಮಗೆಲ್ಲ ಗೊತ್ತಿರುವಂತೆ ಭಾರತದಲ್ಲಿ 2007ನೇ ಇಸ್ವಿಯನ್ನು ಬ್ರಾಡ್‌ಬ್ಯಾಂಡ್‌ ವರ್ಷ ಎಂದು ಘೋಷಿಸಲಾಗಿದೆ. ನಮ್ಮ ದೇಶದಲ್ಲಿ ಭಾರತೀಯ ಭಾಷೆಗಳ ಓದುಗರ ಸಂಖ್ಯೆ ವೃದ್ಧಿಯಾಗುವುದನ್ನು ನೋಡಲು ನಾವು ಕಾತರಗೊಂಡಿದ್ದೇವೆ. ಇಂತಹ ದಿನಗಳಿಗಾಗಿ ನಾವು ಬಹಳ ತಾಳ್ಮೆಯಿಂದ ಕಾಯುತ್ತಿದ್ದೆವು. ದೇಶವಾಸಿ ಭಾರತೀಯರು ಹೆಚ್ಚು ಪ್ರಮಾಣದಲ್ಲಿ ನಮ್ಮ ಚಾನಲ್ಲುಗಳನ್ನು ಓದಲಾರಂಭಿಸಿರುವುದು ಮತ್ತಷ್ಟೂ ಹರ್ಷ ತಂದಿದೆ.

ಈ ಹಿನ್ನೆಲೆಯಲ್ಲಿ ಯೂನಿಕೋಡ್‌ ಫಾಂಟುಗಳಿಗೆ ವರ್ಗಾವಣೆಯಾಗುವ ಕುರಿತು ಕೆಲವು ತಿಂಗಳುಗಳ ಹಿಂದೆ ನಿರ್ಧಾರ ತೆಗೆದುಕೊಳ್ಳಲಾಯಿತು. ದಟ್ಸ್‌ ತಮಿಳ್‌ ಕಳೆದ ವಾರ ಯಶಸ್ವಿಯಾಗಿ ಯೂನಿಕೋಡ್‌ಗೆ ವರ್ಗಾವಣೆಯಾಗಿದೆ. ಸಂಸತದ ವಿಚಾರವೆಂದರೆ, ಎಲ್ಲರೂ ಅದನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ-ಅಪ್ಪಿಕೊಂಡಿದ್ದಾರೆ. ಮುಂದಿನ ಎರಡು ತಿಂಗಳುಗಳಲ್ಲಿ ನಮ್ಮ ಇತರ ಭಾಷಾ ಚಾನಲ್ಲುಗಳೂ ಯೂನಿಕೋಡ್‌ಗೆ ವರ್ಗಾವಣೆಯಾಗಲಿವೆ. ಓಪನ್‌ಸೋರ್ಸ್‌ ಯೂನಿಕೋಡ್‌ ಫಾಂಟ್‌ಗಳನ್ನು ಅಭಿವೃದ್ಧಿಪಡಿಸಿದವರಿಗೆ ಒನ್‌ ಇಂಡಿಯಾ ಧನ್ಯವಾದಗಳನ್ನು ಅರ್ಪಿಸಬಯಸುತ್ತದೆ. ವಿಶೇಷವಾಗಿ ‘ಇಂಡಿಯನ್‌ ಲ್ಯಾಂಗ್ವೇಜಸ್‌ ಗ್ರೂಪ್‌ ಆಫ್‌ ಅಡ್ವಾನ್ಸ್ಡ್‌ ಟೆಕ್ನಾಲಜಿ ಸೆಂಟರ್‌ ಟಿಸಿಎಸ್‌ ಹೈದರಾಬಾದ್‌’ ಇವರು ನೇತೃತ್ವ ವಹಿಸಿ, ಅನೇಕ ಯೂನಿಕೋಡ್‌ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ನೀಡಿದ್ದಾರೆ. ಇವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಕಳೆದ ಏಳು ವರ್ಷಗಳಲ್ಲಿ ಭಾರತೀಯ ಭಾಷಾ ಪತ್ರಿಕೋದ್ಯಮದಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ. ಸಾಧಿಸಬೇಕಿರುವುದು ಇನ್ನೂ ಸಾಕಷ್ಟಿದೆ ಎಂಬ ಅರಿವೂ ನಮಗಿದೆ. ನಾವು ಹೊಸದಾಗಿ ತರಲಿರುವ ವಿಶೇಷತೆಗಳು ನಿಮ್ಮನ್ನು ನಿರಾಶಗೊಳಿಸಲಾರವು ಎಂಬ ಭರವಸೆಯನ್ನು ನಾವು ನೀಡಬಯಸುತ್ತೇವೆ.

ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ...

ನಿಮ್ಮ ವಿಶ್ವಾಸಿ,

ಬಿ.ಜಿ.ಮಹೇಶ್‌

bg.mahesh@greynium.com

ಏಪ್ರಿಲ್‌ 09, 2007

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more