• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ವಿವಾದ ಗಟ್ಟಿಯಾದ ಚರ್ಚೆ ಅಗತ್ಯ : ಇನ್ಫಿ ಮೂರ್ತಿ

By Staff
|

Make forceful argument for Cauvery waters: N R Narayana Murthyಮೈಸೂರು : ಕಾವೇರಿ ವಿವಾದವನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬಂದ್‌, ಗಲಭೆಗಳನ್ನು ಮಾಡುವುದನ್ನು ಇನ್ಪೋಸಿಸ್‌ನ ಮುಖ್ಯಸ್ಥ ಹಾಗೂ ಚೇರಮನ್‌ ಎನ್‌ ಆರ್‌ ನಾರಾಯಣ ಮೂರ್ತಿ ಖಂಡಿಸಿದ್ದಾರೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ, ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸರ್ಕಾರದ ಮುಂದೆ ನಿಂತು ವಾದಿಸುವ ಅಗತ್ಯವಿದೆ. ಅದರ ಬದಲು ಅನಗತ್ಯವಾಗಿ, ಬಂದ್‌, ಮೆರವಣಿಗೆ ಎಂಬ ಹೆಸರಿನಲ್ಲಿ ಅಂಗಡಿಗಳನ್ನು ಲೂಟಿ ಮಾಡುವುದು, ಬಸ್‌ಗಳಿಗೆ ಕಲ್ಲು ಎಸೆಯುವುದು ಮುಂತಾದ ಅಮಾನವೀಯ ಕೃತ್ಯಗಳನ್ನು ಎಸಗುವುದರಿಂದ ಸಾಮಾನ್ಯ ನಾಗರೀಕರಿಗೆ ಹಾಗೂ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಇದು ನ್ಯಾಯ ಕೇಳುವ ಸರಿಯಾದ ಕ್ರಮವಲ್ಲ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯ ಕೇಳುವ ಹಕ್ಕು ಎಲ್ಲರಿಗೂ ಇದೆಯಾದರೂ, ಈ ಪ್ರಸಂಗದಲ್ಲಿ ರಾಜ್ಯ ಸರ್ಕಾರ ವಿವಾದದ ಜವಾಬ್ದಾರಿಯನ್ನು ಹೊತ್ತು , ಸಮರ್ಥವಾಗಿ ಕೇಂದ್ರದಲ್ಲಿ ವಾದ ಮಂಡಿಸಬೇಕು ಐಟಿ ಉದ್ಯಮಗಳನ್ನು ಸುಮ್ಮನೆ ಬಂದ್‌ ಮಾಡುವುದರಿಂದ ನ್ಯಾಯ ಸಿಗುವುದಿಲ್ಲ . ಕಾವೇರಿ ವಿವಾದದ ವಿಷಯದಲ್ಲಿ ಭಾವನಾತ್ಮಕ ಕ್ರಮಕ್ಕಿಂತ, ಹೆಚ್ಚು ವಾಸ್ತವಾಂಶವನ್ನು ಪರಿಗಣಿಸಿ ನಮ್ಮ ವಾದವನ್ನು ಹೂಡಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.

ಮೈಸೂರಿನ ಇನ್ಫೋಸಿಸ್‌ನಲ್ಲಿ ರಾಷ್ಟ್ರಪತಿಗಳ ಭೇಟಿಯ ನಂತರ ಸುದ್ದಿಗಾರರೊಡನೆ ಮಾತಾಡುತ್ತಾ , ನಾರಾಯಣ ಮೂರ್ತಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

(ಯುಎನ್‌ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more