ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ : 14ನೇ ಸಾರ್ಕ್‌ ಶೃಂಗ ಸಭೆಯಲ್ಲಿ ಪಾಕ್‌ ಅತೃಪ್ತಿ

By Staff
|
Google Oneindia Kannada News

ನವದೆಹಲಿ : ಎರಡು ದಿನಗಳ ಕಾಲ ನಡೆಯುವ 14ನೇ ಸಾರ್ಕ್‌ ಶೃಂಗ ಸಭೆ ನವದೆಹಲಿಯಲ್ಲಿ ಮಂಗಳವಾರ ಆರಂಭಗೊಂಡಿದೆ.

ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೌಕತ್‌ ಅಜೀಜ್‌, ಸಾರ್ಕ್‌ ಅಸ್ತಿತ್ವವನ್ನು ಗೇಲಿ ಮಾಡಿದರು. ಪರಸ್ಪರ ಅಪನಂಬಿಕೆ ಮತ್ತು ಸಮಸ್ಯೆಗಳ ಮಧ್ಯೆ ಸಾರ್ಕ್‌ ರಾಷ್ಟ್ರಗಳ ನಡುವೆ ಅನ್ಯೋನ್ಯತೆ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಸಾರ್ಕ್‌ ವಿಫಲವಾಗಿದೆ ಎಂದರು.

ಸಾರ್ಕ್‌ನ ಹೊಸ ಸದಸ್ಯ ದೇಶವಾದ ಆಫ್ಘಾನಿಸ್ತಾನ ಸಭೆಯಲ್ಲಿ ಪಾಲ್ಗೊಂಡಿದೆ. ಈ ದೇಶವನ್ನು ಅಲ್ಲಿನ ಪ್ರಧಾನಿ ಹಮೀದ್‌ ಕರ್ಜಿ ಪ್ರತಿನಿಧಿಸಿದ್ದಾರೆ. ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌, ಉದ್ಘಾಟನಾ ಭಾಷಣ ಮಾಡಿದರು.

ಸಭೆಯಲ್ಲಿ ಭಯೋತ್ಪಾದಕತೆ ನಿಗ್ರಹ, ಸಾರ್ಕ್‌ ರಾಷ್ಟ್ರಗಳ ನಡುವೆ ವ್ಯಾಪಾರ, ವಾಣಿಜ್ಯ ವೃದ್ಧಿ ಬಗ್ಗೆ ಚರ್ಚೆಗಳು ನಡೆದಿವೆ. ಸಭೆಯಲ್ಲಿ ಅಮೆರಿಕ, ಜಪಾನ್‌, ಬ್ರಿಟನ್‌ ರಾಷ್ಟ್ರಗಳು ಪಾಲ್ಗೊಂಡಿದ್ದು, ಅವು ವೀಕ್ಷಣಾ ರಾಷ್ಟ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X