ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾ. ರಾಜೇಂದ್ರಬಾಬುಗೆ ‘ಎನ್ಎಚ್ಆರ್ಸಿ’ ಅಧ್ಯಕ್ಷ ಸ್ಥಾನ
ನವದೆಹಲಿ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ)ಅಧ್ಯಕ್ಷ ಸ್ಥಾನ, ಕನ್ನಡಿಗ ಎಸ್.ರಾಜೇಂದ್ರ ಬಾಬು ಅವರಿಗೆ ಒಲಿದಿದೆ.
ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾಗಿದ್ದ ಅವರು, ಹೊಸ ಹುದ್ದೆಯ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಕರ್ನಾಟಕ ವಿವಿಯಿಂದ ಕಾನೂನು ಪದವಿ ಪಡೆದ ಅವರು, 1997ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೇರಿದ್ದರು.
ವೇದಾಂತದಲ್ಲಿ ಅಪಾರ ಆಸಕ್ತಿ ಹೊಂದಿರುವ ರಾಜೇಂದ್ರ ಬಾಬು, ಸಮಾಜಸೇವೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅಂತಾರಾಷ್ಟ್ರೀಯ ದಾದಿಯರ ಸೇವಾ ಸಂಘದ ಅಧ್ಯಕ್ಷರಾಗಿ ಕಳೆದ 25ವರ್ಷದಿಂದ ಅವರು ಸೇವೆ ಸಲ್ಲಿಸುತ್ತಿದ್ದಾರೆ.
(ಏಜನ್ಸೀಸ್)
Comments
Story first published: Tuesday, April 3, 2007, 5:30 [IST]