ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ-ಮಂಗಳೂರು ರೈಲು ಸೇವೆ ಮೇನಲ್ಲಿ ಆರಂಭ?

By Staff
|
Google Oneindia Kannada News

ಮಂಗಳೂರು : ಮೇ ಮೊದಲ ವಾರದಲ್ಲಿ ಬಹುನಿರೀಕ್ಷಿತ ಹಾಸನ-ಮಂಗಳೂರು ರೈಲು ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ವಿಚಾರವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

ಸುದ್ದಿಗಾರೊಂದಿಗೆ ಅವರು ಮಾತನಾಡುತ್ತಾ, ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಮೊದಲ ವಾರದಲ್ಲಿ ರೈಲ್ವೇ ಸಚಿವ ಲಾಲೂ ಪ್ರಸಾದ್‌ ಯಾದವ್‌ ರೈಲು ಸೇವೆ ಉದ್ಘಾಟಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಯಾಗಿದ್ದು, ಕೆಲವು ಔಪಚಾರಿಕತೆಗಳು ಮಾತ್ರ ಬಾಕಿಯಿವೆ ಎಂದು ತಿಳಿಸಿದರು.

ಯಾವಾಗ ನನಸು...? : ಗೇಜ್‌ ಪರಿವರ್ತನೆ ಹಿನ್ನೆಲೆಯಲ್ಲಿ ಮಂಗಳೂರು-ಹಾಸನ-ಬೆಂಗಳೂರು ನಡುವಿನ ರೈಲು ಸೇವೆ ಸೆಪ್ಟೆಂಬರ್‌ 1996ರಿಂದ ಸ್ಥಗಿತಗೊಂಡಿತ್ತು. 2005ರಲ್ಲೇ ಗೇಜ್‌ ಪರಿವರ್ತನೆ ಕಾರ್ಯ ಪೂರ್ಣಗೊಂಡಿದ್ದರೂ, ಪ್ರಯಾಣಿಕ ಸೇವೆ ಪುನಾರಂಭವಾಗುವುದು ಇನ್ನೂ ಕನಸಾಗೇ ಉಳಿದಿರುವುದು ವಿಪರ್ಯಾಸ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X