ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ರೂ.ನಾಣ್ಯದಲ್ಲಿ ಶಿಲುಬೆ : ಅರ್ಥವೋ? ಅನರ್ಥವೋ?

By Staff
|
Google Oneindia Kannada News

ಬೆಂಗಳೂರು : ಇತ್ತೀಚೆಗೆ ಬಿಡುಗಡೆಯಾಗಿರುವ ಎರಡು ರೂಪಾಯಿ ನಾಣ್ಯದಲ್ಲಿನ ಶಿಲುಬೆ ಗುರುತು, ಮತಾಂತರ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

2005ರಲ್ಲೇ ಕೇಂದ್ರ ಸರ್ಕಾರ ಈ ನಾಣ್ಯ ಹೊರತಂದಿದೆ. ಒಂದು ವರ್ಗ ಇದು ಮತ ಪ್ರಚಾರದ ತಂತ್ರ ಎಂದು ಆರೋಪಿಸಿದ್ದು, ಇನ್ನೊಂದು ವರ್ಗ ಇದು ರಾಷ್ಟ್ರೀಯ ಏಕತೆಯ ಸಂಕೇತ ಎಂದು ವಾದಿಸುತ್ತಿದೆ.

2001ರಲ್ಲಿ ಚಲಾವಣೆಗೆ ಬಂದ ನಾಣ್ಯದಲ್ಲಿ ರಾಷ್ಟ್ರೀಯ ಏಕತೆಯ ಸೂಚಕ ಎಂದು ಭಾರತ ಭೂಪಟ ಹಾಗೂ ಅದರ ಮಧ್ಯೆ ತ್ರಿವರ್ಣ ಧ್ವಜದ ಚಿತ್ರ ಮುದ್ರಿಸಲಾಗಿತ್ತು. ಏಕಾಏಕಿ ಈ ಶಿಲುಬೆ ಚಿಹ್ನೆಯನ್ನು ರಾಷ್ಟ್ರೀಯ ಏಕತೆಯ ಚಿಹ್ನೆಯಾಗಿ ಅಂಗೀಕಾರ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡುವವರಿಲ್ಲದಂತಾಗಿದೆ. ಇಂತಹ ಚಿಹ್ನೆಯನ್ನು ರಾಷ್ಟ್ರೀಯ ಚಿಹ್ನೆಯಾಗಿ ಅಂಗೀಕರಿಸುವ ಮೊದಲು ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.

ಯುಪಿಎ ಸರ್ಕಾರ ರಚನೆಯಾದ ನಂತರ ದೇಶಾದ್ಯಂತ ಮತಾಂತರ ಚಟುವಟಿಕೆಗಳು ವ್ಯಾಪಕಗೊಂಡಿವೆ. ನಾಣ್ಯದಲ್ಲಿ ಶಿಲುಬೆ ಅಚ್ಚುಹಾಕಿಸಿರುವ ಪ್ರಸಂಗ, ಸರ್ಕಾರಿ ಮಟ್ಟದಲ್ಲೂ ಮತಾಂತರಕ್ಕೆ ಕುಮ್ಮಕ್ಕು ಇದೆ ಎಂಬುದನ್ನು ಸಾರಿ ಹೇಳುತ್ತದೆ ಎಂಬ ಮಾತುಗಳು ಮತ್ತೆ ಅನುರಣಿಸಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X