ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ-2007 : 1ಲಕ್ಷಕ್ಕೂ ಅಧಿಕ ಆಕಾಂಕ್ಷಿಗಳಿಂದ ಅರ್ಜಿ

By Staff
|
Google Oneindia Kannada News

ಬೆಂಗಳೂರು : ವೃತ್ತಿಪರ ಕಾಲೇಜುಗಳಲ್ಲಿ ಸೀಟು ಪಡೆಯುವ ಆಸೆಹೊತ್ತ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು, 2007ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ಅರ್ಜಿ ಸಲ್ಲಿಸಿದ್ದಾರೆ.

ಮೇ 9ರಂದು ರಾಜ್ಯದ 205 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ. ಬೆಂಗಳೂರು ನಗರವೊಂದರಲ್ಲೇ 56ಕೇಂದ್ರಗಳಿವೆ.

ಒಟ್ಟು 1.06ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 135 ಅರ್ಜಿಗಳು ತಿರಸ್ಕೃತಗೊಂಡಿವೆ. ಕೆಲವು ಅರ್ಜಿಗಳು ಹೆಬ್ಬೆರಳ ಗುರುತು ಇಲ್ಲದ ಕಾರಣ ಇನ್ನೂ ಕೆಲವು ಅರ್ಜಿಗಳು ಭಾವಚಿತ್ರ ಲಗತ್ತಿಸದ ಕಾರಣ ತಿರಸ್ಕೃತಗೊಂಡಿವೆ.

ಏಪ್ರಿಲ್‌ 3ರಂದು ತಿರಸ್ಕೃತಗೊಂಡ ಅರ್ಜಿಗಳನ್ನು http://kar.nic.in/cet ನಲ್ಲಿ ಪ್ರಕಟಿಸಲಾಗುವುದು. ಈ ವಿದ್ಯಾರ್ಥಿಗಳು ಏಪ್ರಿಲ್‌ 10ರೊಳಗಾಗಿ ಮಲ್ಲೇಶ್ವರಮ್‌ನಲ್ಲಿರುವ ಸಿಇಟಿ ಕಚೇರಿ ಬಂದು, ಭಾವಚಿತ್ರ ಹಾಗೂ ಹೆಬ್ಬೆರಳ ಗುರುತು ನೀಡಬೇಕು. ಇಲ್ಲದಿದ್ದಲ್ಲಿ ಪರೀಕ್ಷೆಗೆ ಅನುಮತಿ ನೀಡಲಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್‌ 24ರಿಂದ, ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ತಮ್ಮ ತಮ್ಮ ಕಾಲೇಜುಗಳಲ್ಲಿ ಪಡೆದುಕೊಳ್ಳಬಹುದು. ಸಿಇಟಿಗೆ ನೇರವಾಗಿ ಅರ್ಜಿ ಸಲ್ಲಿಸಿದವರು, ಏಪ್ರಿಲ್‌ 25ರ ನಂತರ ಪ್ರವೇಶ ಪತ್ರಗಳನ್ನು ಪಡೆಯಬಹುದು.

ಕಾಮೆಡ್‌-ಕೆ ಅವಧಿ ವಿಸ್ತರಣೆ : 2007ನೇ ಸಾಲಿನ ಯುಜಿಇಟಿಗೆ ಅರ್ಜಿ ಸಲ್ಲಿಸಲು ಕಾಮೆಡ್‌-ಕೆ ಏಪ್ರಿಲ್‌ 12ರವರೆಗೆ ಅವಧಿ ವಿಸ್ತರಿಸಿದೆ. ಮ್ಯಾನೇಜ್‌ಮೆಂಟ್‌ ಕೋಟಾದ ಅಡಿಯಲ್ಲಿ ಪ್ರವೇಶ ಬಯಸುವವರಿಗೆ, ಸಿಇಟಿ ಮಾದರಿಯಲ್ಲಿ ಕಾಮೆಡ್‌-ಕೆ ಯುಜಿಇಟಿ ನಡೆಸುತ್ತಿದೆ. ಈ ಪರೀಕ್ಷೆ ಮೇ 6ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :http://www.karnataka.com/education/cet/

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X