ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಭೂಕಂಪ; ಭಾರತ-ಪಾಕ್‌ನಲ್ಲಿ ಕಂಪನ

By Staff
|
Google Oneindia Kannada News

ಇಸ್ಲಾಮಾಬಾದ್‌ : ಪೂರ್ವೋತ್ತರ ಅಫ್ಘಾನಿಸ್ತಾನದ ಪರ್ವತ ಶ್ರೇಣಿಯಲ್ಲಿ ಮಂಗಳವಾರ ಭೂಕಂಪವಾದ ಕಾರಣ, ನೆರೆಯ ಪಾಕಿಸ್ತಾನದಲ್ಲೂ ಪ್ರಬಲ ಕಂಪನ ಉಂಟಾಗಿದೆ.

ಅಫ್ಘಾನಿಸ್ತಾನದಲ್ಲಿ ಬೆಳಗ್ಗೆ 08.05(ಭಾರತೀಯ ಕಾಲಮಾನ-ಬೆಳಗ್ಗೆ 09.05) ಸುಮಾರು ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ ಇದರ ತೀವ್ರತೆ 6.2ರಷ್ಟು ದಾಖಲಾಗಿದೆ.

ಪಾಕಿಸ್ತಾನದಲ್ಲಿ ಕಂಪನದ ತೀವ್ರತೆ 5.8ರಷ್ಟು ದಾಖಲಾಗಿದೆ. ಜಮ್ಮು-ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಕೆಲವೆಡೆಯೂ ಭೂಕಂಪ ಉಂಟಾಗಿದ್ದು, 5.9ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ದೆಹಲಿಯಲ್ಲೂ ಕಂಪನದ ಅನುಭವವಾಗಿದೆ.

ಭೂಕಂಪ ಉಂಟಾಗುತ್ತಿದ್ದಂತೆಯೇ ಭಯಭೀತರಾದ ಜನರು ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡಿ ಬಂದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X