ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕರ್ನಾಟಕ ರತ್ನ ಬೇಕಿರಲಿಲ್ಲ .. ಬೇಡವೆನ್ನುವಂತಿರಲಿಲ್ಲ’

By Staff
|
Google Oneindia Kannada News

Siddaganga seer receives Karnataka rathna awardಬೆಂಗಳೂರು : ಸುವರ್ಣ ಕರ್ನಾಟಕದ ತೇರಿಗೆ ಕಳಶವಿಟ್ಟಂತೆ ಅಪಾರ ಅಭಿಮಾನಿಗಳು ಮತ್ತು ಭಕ್ತಜನರ ಮಧ್ಯೆ, ಸಿದ್ಧಗಂಗಾ ಮಠಾಧೀಶ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರಕಾಶಿಸುತ್ತಿದ್ದರು.

ವಿಧಾನಸೌಧದ ಮುಂದೆ ನಡೆದ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಅತ್ಯುನ್ನತ ಗೌರವ ಕರ್ನಾಟಕ ರತ್ನ ಪ್ರಶಸ್ತಿಯನ್ನು, ಅತ್ಯಂತ ವಿನೀತರಾಗಿ ಸ್ವೀಕರಿಸಿದ ಶ್ರೀಗಳು, ಆನಂದ ಭಾಷ್ಪ ಸುರಿಸಿದರು.

ಭಾನುವಾರವಷ್ಟೇ(ಏ.1) ನೂರನೇ ವರ್ಷಕ್ಕೆ ಕಾಲಿಟ್ಟ ಶ್ರೀಗಳ ಮುಖದಲ್ಲಿ ಎಂದಿನ ಮಂದಹಾಸವಿತ್ತು. ನಡೆದಾಡುವ ದೇವರನ್ನು ಹತ್ತಿರದಿಂದ ಕಾಣಲು, ಭಕ್ತರು ಪರದಾಡುತ್ತಿದ್ದರು. ಈ ಮಧ್ಯೆ ಮಾತು ಆರಂಭಿಸಿದ ಶ್ರೀಗಳು, ನನಗೆ ಇಂತಹ ಪ್ರಶಸ್ತಿಗಳ ಬಗ್ಗೆ ಮೋಹವಿಲ್ಲ. ಪ್ರಶಸ್ತಿ ನೀಡುವ ಮೊದಲು ನನ್ನನ್ನು ಕೇಳಿದ್ದರೇ, ನಾನು ಒಪ್ಪುತ್ತಿರಲಿಲ್ಲ. ನಮ್ಮ ಸಮ್ಮತಿ ಪಡೆಯದೇ ಪ್ರಶಸ್ತಿ ಘೋಷಿಸಿ, ಸರ್ಕಾರ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿತು ಎಂದರು.

ಆದರೂ ಅಭಿಮಾನಿಗಳು ಮತ್ತು ಸರ್ಕಾರದ ಒತ್ತಡ ಮತ್ತು ಪ್ರೀತಿಗೆ ಮಣಿದು ಈ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಬಸವ ಅನುಯಾಯಿಗಳು ಪ್ರಶಸ್ತಿ-ಬಿರುದು-ಸನ್ಮಾನಗಳ ಒಪ್ಪಬಾರದು ಎಂದು ಶ್ರೀಗಳು ಹೇಳಿದರು.

ಬೆಳ್ಳಿ ಸಿಂಹಾಸನ ಅರ್ಪಣೆ : ಮುದ್ದೇಬಿಹಾಳದ ಡವಳಿಗೆಯಲ್ಲಿ ಅಭಿಮಾನಿಗಳು ತಮಗೆ ನೀಡಿದ್ದ ಬೆಳ್ಳಿ ಸಿಂಹಾಸವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಶ್ರೀಗಳಿಗೆ ಅರ್ಪಿಸಿದರು. ಈ ಸಿಂಹಾಸನ ಹತ್ತುವ ಅರ್ಹತೆ ಇರುವುದು ಶ್ರೀಗಳಿಗೆ ಮಾತ್ರ ಎಂದು ಅಭಿಮಾನದಿಂದ ಹೇಳಿದರು.

ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ , ಪ್ರತಿಪಕ್ಷದ ನಾಯಕ ಧರ್ಮಸಿಂಗ್‌ ಮತ್ತು ರಾಜ್ಯ ಸಚಿವರು, ಅಧಿಕಾರಿಗಳು, ಜನಪ್ರತಿನಿಧಿಗಳು ಸಮಾರಂಭದಲ್ಲಿ ಹಾಜರಿದ್ದರು. ಸಮಾರಂಭದಲ್ಲಿ ಪಾಲ್ಗೊಂಡ ಭಕ್ತ ಜನತೆಗೆ ಸಿಹಿ ವಿತರಿಸಲಾಯಿತು. ವಚನ ಗಾಯನ, ಅಪರ್ಣ ನಿರೂಪಣೆ ಕಾರ್ಯಕ್ರಮಕ್ಕೆ ಪೂರಕವಾಗಿತ್ತು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X