• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬದ ಇರುಳು! : ಸೋಮವಾರ ‘ಬೆಂಗಳೂರು ಕರಗ’

By Staff
|

Banglore Karaga on Monday(Apr.01)ಬೆಂಗಳೂರು : ಇತಿಹಾಸ ಪ್ರಸಿದ್ಧ ಕರಗ ಉತ್ಸವ ನಗರದಲ್ಲಿ ಸೋಮವಾರ ನಡೆಯಲಿದೆ.

ಚೈತ್ರ ಮಾಸದ ಮೊದಲ ಹುಣ್ಣಿಮೆಯಂದು ಅಂದರೆ ಇಂದಿನಿಂದ ಆರಂಭವಾಗುವ ಕರಗ ಉತ್ಸವ, ಮುಂದಿನ ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಮಧ್ಯರಾತ್ರಿ 12ರ ನಂತರ ಆರಂಭವಾಗುವ ಉತ್ಸವದಲ್ಲಿ ಮಲ್ಲಿಗೆ ಹೂವಿನಿಂದ ಕಂಗೊಳಿಸುವ ಕರಗವನ್ನು ಹೊತ್ತವರು, ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಟು, ಅರಳೆಪೇಟೆಯಲ್ಲಿರುವ ಮಸ್ತಾನ್‌ ಷಾ ದರ್ಗಾದ ಮುಂದೆ ನಿಂತು ಪೂಜಾ ವಿಧಾನಗಳನ್ನು ಪೂರೈಸುತ್ತಾರೆ.

ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಕರಗ, ಬೆಂಗಳೂರಿಗರಿಗೆ ಹೊಸ ಸಡಗರ ತರುತ್ತದೆ. ಕರಗದ ಹಿಂದೆ ತೇರು, ಪಲ್ಲಕ್ಕಿಗಳು ಹಾಗೂ ಅದರ ಹಿಂದೆ ಭಕ್ತಾದಿಗಳು ಭಗವಂತನ ನಾಮ ಸ್ಮರಣೆ ಮಾಡುತ್ತಾ ಸಾಗುತ್ತಾರೆ. ಈ ಬಾರಿ ಕರಗವನ್ನು 36 ವರ್ಷ ವಯಸ್ಸಿನ ಸಿ.ಎಂ. ಲೋಕೇಶ್‌ ಹೊರಲಿದ್ದಾರೆ.

ಕರಗದ ಆರಾಧಕರು ಯಾರು?

ವಹ್ನಿಕುಲ ಕ್ಷತ್ರಿಯರು ಅಥವಾ ತಿಗಳ ಜನಾಂಗಕ್ಕೆ ಇದು ಪ್ರಮುಖ ಹಬ್ಬವಾಗಿದೆ. ಮಹಾಭಾರತದ ದ್ರೌಪದಿ ದೇವಿಯನ್ನು ಆದಿಶಕ್ತಿಯೆಂದು ನಂಬಿ ಪೂಜಿಸುತ್ತಾ ಬಂದಿರುವ ಇವರನ್ನು ಧರ್ಮರಾಯ ಒಕ್ಕಲು ಎಂದೂ ಕರೆಯಲಾಗುತ್ತದೆ.

ದ್ವಾಪರ ಯುಗದಲ್ಲಿ ಕೌರವರನ್ನು ಸಂಹರಿಸಿ, ಸ್ವರ್ಗಾರೋಹಣ ಮಾಡಲು ಪಾಂಡವರು ಹೊರಡುತ್ತಾರೆ. ಮಾರ್ಗಮಧ್ಯದಲ್ಲಿ ದ್ರೌಪದಿಗೆ ತಿಮಿರಾಸುರ ಎಂಬ ರಾಕ್ಷಸ ಎದುರಾಗಿ ಅವಳ ಶೀಲಹರಣಕ್ಕೆ ಪ್ರಯತ್ನಿಸುತ್ತಾನೆ. ಆಗ ದ್ರೌಪದಿ ಆದಿಶಕ್ತಿಯ ರೂಪ ತಾಳಿ ಅವನನ್ನು ಸಂಹರಿಸುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಮಾನಸ ಪುತ್ರರಾಗಿ ಜನಿಸಿ, ಹೋರಾಡಿದವರೇ ಮುಂದೆ ವಹ್ನಿಕುಲ ಕ್ಷತ್ರಿಯರಾದರು ಎಂಬುದು ನಂಬಿಕೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more