ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ರಥೋತ್ಸವ

By Staff
|
Google Oneindia Kannada News

ಮೈಸೂರು : ನಂಜನಗೂಡು ಶ್ರೀಕ್ಷೇತ್ರದಲ್ಲಿ ಪ್ರಸಿದ್ಧ ದೊಡ್ಡ ಜಾತ್ರೆಯ ಸಡಗರ. ಈ ಮಧ್ಯೆ ಶ್ರೀಕಂಠೇಶ್ವರ ಸ್ವಾಮಿಯ ಪಂಚಮಹಾ ರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು.

ದೇವಸ್ಥಾನದ ಮುಂಭಾಗ ಗಣೇಶನ ಪೂಜೆ ನಂತರ, ರಥೋತ್ಸವ ಆರಂಭಗೊಂಡಿತು. ಐದು ರಥಗಳನ್ನು ನಿಯಮಬದ್ಧವಾಗಿ ಎಳೆದ ಭಕ್ತರು, ರೋಮಾಂಚಿತರಾದರು. ಇದಕ್ಕೂ ಮುನ್ನ ಸಚಿವ ಡಿ.ಟಿ.ಜಯಕುಮಾರ್‌ ಪೂಜೆ ಸಲ್ಲಿಸಿದರು.

90ಅಡಿ ಎತ್ತರದ ಶ್ರೀಕಂಠೇಶ್ವರ ರಥವನ್ನು ಗೌತಮ ರಥ ಎಂದೂ ಕರೆಯುತ್ತಾರೆ. 205 ಟನ್‌ ತೂಕದ ರಥ, ನಗರದ ಬೀದಿಗಳನ್ನು ಪ್ರವೇಶಿಸಿದಾಗ, ಜನರು ‘ಜೈ ಶ್ರೀಕಂಠ’ , ‘ಜೈ ನಂಜುಂಡ’ ಎಂಬ ಘೋಷಣೆ ಕೂಗಿದರು. ನಾಲ್ಕು ವರ್ಷಗಳ ಹಿಂದೆ ರಥೋತ್ಸವದ ಸಂದರ್ಭದಲ್ಲಿ ಉಂಟಾದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಆಡಳಿತವರ್ಗ ಎಚ್ಚರಿಕೆ ವಹಿಸಿತ್ತು. ಪೊಲೀಸರು ಬಿಗಿ ಬಂದೋಬಸ್ತು ವ್ಯವಸ್ಥೆ ಕಲ್ಪಿಸಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X