• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್‌ಫೋನ್‌ಗೂ ಎಎಎ ಸೈಜಿನ ಬ್ಯಾಟರಿ ಬಳಕೆ!!

By Staff
|

A mobile phone that runs on AAA battery!ಓರ್ಲಾಂಡೋ : ಮೊಬೈಲ್‌ ಫೋನ್‌ ಬಳಕೆದಾರರಿಗೆ ಬ್ಯಾಟರಿ ಚಾರ್ಚಿಂಗ್‌ ಒಂದು ಸಮಸ್ಯೆ. ಈ ಸಮಸ್ಯೆಗೆ ಫಿಲಿಪ್ಸ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಪರಿಹಾರ ಹುಡುಕಿದೆ.

ಸಾಮಾನ್ಯಬಳಕೆಯಲ್ಲಿರುವ ಎಎಎ ಸೈಜಿನ ಬ್ಯಾಟರಿಗಳನ್ನು, ಮೊಬೈಲ್‌ಗೂ ಬಳಸುವ ಹೊಸ ವಿಧಾನವನ್ನು ಫಿಲಿಪ್ಸ್‌ ಕಂಡು ಹಿಡಿದಿದೆ.

ಇಸ್ರೇಲಿ ಮೂಲದ ಎನರ್ಜೈಸರ್‌ ಹೋಲ್ಡಿಂಗ್‌ ಹಾಗೂ ಟಿಕ್ಟಿಮ್‌ ಸಂಸ್ಥೆಯ ಬ್ಯಾಟರಿ ತಂತ್ರಜ್ಞಾನವನ್ನು ಬಳಸಿಕೊಂಡು, Xenium NRG handset ಸಿದ್ಧಗೊಳಿಸಲಾಗಿದೆ. ಇದರಲ್ಲಿ ಎಎಎ ಸೈಜಿನ ಬ್ಯಾಟರಿಯನ್ನು ಸುಲಭವಾಗಿ ಬಳಸಬಹುದಾಗಿದೆ.

ರೀಚಾರ್ಚೆಬಲ್‌ ಅಥವಾ ಸಾಮಾನ್ಯ ಬಳಕೆಯ ಬ್ಯಾಟರಿಗಳನ್ನು ಫೋನಿನಲ್ಲಿರುವ ಹೋಲ್ಡರ್‌ಗೆ ಹೊಂದಿಸಿದರೆ ಸಾಕು. ಇದರಿಂದ ಗಂಟೆಗಟ್ಟ ಲೆ ಹರಟಬಹುದು. ರೀಚಾರ್ಚೆಬಲ್‌ ಬ್ಯಾಟರಿ ಉಪಯೋಗಿಸಿದರೆ ಡಬಲ್‌ ಅನುಕೂಲ. ಹೇಗೆಂದರೆ, ಮಾಮೂಲಿನಂತೆ ಮೊಬೈಲ್‌ ಫೋನನ್ನು ಚಾರ್ಚ್‌ ಮಾಡಲು ಎಸಿ ಸಪ್ಲೈಗೆ ಹಾಕಿದಾಗ, ರೀಚಾರ್ಚೆಬಲ್‌ ಬ್ಯಾಟರಿ ಕೂಡ ಚಾರ್ಚ್‌ ಆಗುತ್ತದೆ. 3 ಗಂಟೆಗಳ ಅಧಿಕ ಟಾಕ್‌ ಟೈಮ್‌ ಈ ವಿಧಾನದಿಂದ ಪಡೆಯಬಹುದು.

ಮೊಬೈಲ್‌ ಬ್ಯಾಟರಿ ಡೌನ್‌ ಆಗಿದೆ. ಚಾರ್ಚಿಂಗ್‌ ಪಾಯಿಂಟ್‌ ಸಿಗುತ್ತಿಲ್ಲ ಎಂದು ಕೊರಗುವ ಬದಲು, ಫಿಲಿಫ್ಸ್‌ನ ಈ ಹೊಸ ಆವಿಷ್ಕಾರವನ್ನು ಬಳಸಬಹುದು. ಆದರೆ ಈ ಮೊಬೈಲ್‌ ಬಳಸಲು ಇನ್ನೂ ವರ್ಷಾಂತ್ಯದವರೆವಿಗೂ ಕಾಯಬೇಕು.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more