ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ‘ಉದ್ದಿಮೆಗಳ ಕಲ್ಯಾಣ’ : ಕೇಂದ್ರ ಅಸ್ತು

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದಲ್ಲಿ 29 ವಿಶೇಷ ಆರ್ಥಿಕ ವಲಯ (Special economic zones) ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ರಾಜ್ಯಬೃಹತ್‌ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಎನ್‌ .ಹೆಚ್‌. ಶಿವಶಂಕರ್‌ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ , ಅವರು ಈ ವಿಷಯ ತಿಳಿಸಿದರು.

ಎಲೆಕ್ಟ್ರಾನಿಕ್ಸ್‌, ಸಾಫ್ಟ್‌ವೇರ್‌, ಇಂಜಿನೀಯರಿಂಗ್‌, ಆಹಾರ ಸಂಸ್ಕರಣೆ, ಜವಳಿ, ಪ್ಲಾಸ್ಟಿಕ್‌, ವಾಹನ ಮತ್ತು ಯಂತ್ರೋಪಕರಣ, ಔಷಧಿ ಹಾಗೂ ರಾಸಾಯನಿಕ, ಸಿಮೆಂಟ್‌, ಸಕ್ಕರೆ, ಹೋಟೆಲ್‌, ಪೆಟ್ರೋಕೆಮಿಕಲ್‌, ಕಬ್ಬಿಣ ಮತ್ತು ಉಕ್ಕು ಈ ಎಲ್ಲಾ ಕ್ಷೇತ್ರಗಳ ಉದ್ದಿಮೆಗಳ ಅಭಿವೃದ್ಧಿಗೆ ಈ ವಲಯಗಳು ಮೀಸಲಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X