ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.20 : ಮುಂಬೈನಲ್ಲಿ ಅಭಿಷೇಕ್‌-ಐಶ್‌ ಸರಳ ವಿವಾಹ

By Staff
|
Google Oneindia Kannada News

ಮುಂಬೈ : ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಮದುವೆ ದಿನ ಕಡೆಗೂ ನಿರ್ಧಾರವಾಗಿದೆ. ಏ.20ರಂದು ಈ ತಾರಾಜೋಡಿ ಹಸೆಮಣೆ ಹತ್ತಲಿದ್ದಾರೆ ಎಂಬ ಸುದ್ದಿ ಮಂಗಳವಾರ ಖಚಿತಪಟ್ಟಿದೆ.

ಐಶ್‌ ಮತ್ತು ಅಭಿ ಕುಟುಂಬದ ಹಿರಿಯರು ಸೋಮವಾರ ಭೇಟಿಯಾಗಿ, ದಿನಾಂಕ ನಿರ್ಧರಿಸಿದ್ದಾರೆ. ಮದುವೆಯನ್ನು ಸರಳವಾಗಿ ಮತ್ತು ಖಾಸಗಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಕೇವಲ ಸ್ನೇಹಿತರು, ಬಂಧುಗಳಿಗೆ ಮಾತ್ರ ಮದುವೆಗೆ ಪ್ರವೇಶ ಎಂದು ನಂಬಲರ್ಹ ಮೂಲಗಳು ಹೇಳಿವೆ.

ಮುಂಬೈ ಬಳಿಯಿರುವ ಬಚ್ಚನ್‌ರ ಜುಹು ನಿವಾಸದಲ್ಲಿ ಮದುವೆ ನಡೆಯಲಿದೆ. ಜ.14ರಂದು ಈ ತಾರಾಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಮದುವೆ ದಿನಾಂಕದ ಬಗ್ಗೆ ಪತ್ರಿಕೆಗಳಲ್ಲಿ ನಾನಾ ಊಹಾಪೋಹಗಳು ಕೇಳಿ ಬಂದಿದ್ದವು. ಎಲ್ಲಕ್ಕೂ ಈಗ ತೆರೆ ಬಿದ್ದಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X