ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರಿಕೆಟ್ : ಬೆಟ್ಟಿಂಗ್ ನಡೆಸುತ್ತಿದ್ದ 11ಜನರ ಬಂಧನ
ಬೆಂಗಳೂರು : ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ 11ಜನರನ್ನು ಬಂಧಿಸಲಾಗಿದ್ದು, ನಗದು ಸೇರಿದಂತೆ ಸುಮಾರು 10ಲಕ್ಷ ರೂಪಾಯಿ ಮೌಲ್ಯದ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಉಪ-ಆಯುಕ್ತ(ಕ್ರೆೃಮ್-ದಕ್ಷಿಣ) ಅಲೋಕ್ಕುಮಾರ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತ ಶ್ರೀಲಂಕಾ ವಿರುದ್ಧ ಸೋತ ನಂತರ, ನಗರದ ದಕ್ಷಿಣ ಭಾಗದ ವಿವಿಧೆಡೆಗಳಲ್ಲಿ ದಾಳಿ ನಡೆಸಲಾಯಿತು. ಬೆಟ್ಟಿಂಗ್ನಲ್ಲಿ ನಿರತರಾಗಿದ್ದ 11ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 6.25ಲಕ್ಷ ರೂಪಾಯಿ ನಗದು, ಮೊಬೈಲ್ ಫೋನುಗಳು, ಒಂದು ಲ್ಯಾಪ್ಟಾಪ್ ಹಾಗೂ ಒಂದು ವ್ಯಾನ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೂವರು ಬುಕಿಗಳು ತಪ್ಪಿಸಿಕೊಂಡು ಹೋಗಿದ್ದು, ಅವರನ್ನು ಹಿಡಿಯುವ ಕಾರ್ಯ ಜಾರಿಯಲ್ಲಿದೆ. ಹನುಮಂತನಗರ, ಕೆಂಪೇಗೌಡನಗರ ಹಾಗೂ ಚಾಮರಾಜಪೇಟೆ ಪ್ರದೇಶಗಳಲ್ಲಿ ಈ ದಂಧೆ ನಡೆಯುತ್ತಿತ್ತು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, March 26, 2007, 5:30 [IST]