ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಡಿಸಿ ಶಾಲಿನಿ ವರ್ಗಾವಣೆಗೆ ಕರವೇ ವಿರೋಧ

By Staff
|
Google Oneindia Kannada News

ಬೆಳಗಾವಿ : ಬೆಳಗಾವಿ ಜಿಲ್ಲಾಧಿಕಾರಿ ಡಾ. ಶಾಲಿನಿ ರಜನೀಶ್‌ ವರ್ಗಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವರ್ಗಾವಣೆ ಆದೇಶವನ್ನು ಕೂಡಲೇ ರದ್ದು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪ್ರಾದೇಶಿಕ ಆಯುಕ್ತ ಅಮಿತ್‌ಪ್ರಸಾದ್‌ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿ, ವೇದಿಕೆ ಕಾರ್ಯಕರ್ತರು ಸುದ್ದಿಗಾರರ ಜೊತೆ ಮಾತನಾಡಿದರು.

ಶಾಲಿನಿ ರಜನೀಶ್‌ ಅವರನ್ನು ವಿಶ್ವ ಕನ್ನಡ ಸಮ್ಮೇಳನ ನಡೆಯುವ ತನಕವಾದರೂ ಮುಂದುವರೆಸಬೇಕು. ಶಾಲಿನಿ ಅವರು ಬೆಳಗಾವಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಮನವಿ ಪತ್ರದೊಂದಿಗೆ ನೀಡಿದ್ದೇವೆ. ಕನಿಷ್ಠ ಪಕ್ಷ 3 ವರ್ಷವಾದರೂ ಅವರು ಈ ಹುದ್ದೆಯಲ್ಲಿ ಮುಂದುವರೆಯಲೇ ಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ನೆರೆ ಸಂತಸ್ತರಿಗೆ ಪರಿಹಾರ, ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಆಯೋಜನೆ, ಸರ್ಕಾರಿ ಕಚೇರಿಗಳ ಉತ್ತಮ ಕಾರ್ಯ ನಿರ್ವಾಹಣೆ - ಹೀಗೆ ಅನೇಕ ಕಾರ್ಯಗಳನ್ನು ತಮ್ಮ ಕಾಲಾವಧಿಯಲ್ಲಿ ಶಾಲಿನಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ಸೇವೆ ಜಿಲ್ಲೆಗೆ ಇನ್ನಷ್ಟು ಕಾಲ ಬೇಕು ಎಂದು ವೇದಿಕೆ ಕಾರ್ಯಕರ್ತರು ಅಭಿಪ್ರಾಯಪಟ್ಟರು.

(ದಟ್ಸ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X