ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಮ್ಯಾಥ್ಯೂ ಹೇಡನ್‌

By Staff
|
Google Oneindia Kannada News

ಸೇಂಟ್‌ ಕಿಟ್ಸ್‌ : ಮ್ಯಾಥ್ಯೂ ಹೇಡನ್‌ ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 83ರನ್‌ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗಿಗಿಳಿದ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭ ಕಂಡಿತು. 66ಎಸೆತಗಳಲ್ಲಿ ಶತಕ ಬಾರಿಸುವುದರೊಂದಿಗೆ ಮ್ಯಾಥ್ಯೂ ಹೇಡನ್‌ ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದರು. ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಆಟಗಾರನೊಬ್ಬನ ವೇಗದ ಶತಕವೂ ಇದಾಗಿದೆ. ಈ ಮೊದಲು ಈ ದಾಖಲೆ ಕೆನಡಾದ ಜಾನ್‌ ಡೇವಿಸನ್‌ ಹೆಸರಿನಲ್ಲಿತ್ತು. 2003ರ ವಿಶ್ವಕಪ್‌ನಲ್ಲಿ ಡೇವಿಸನ್‌ ವೆಸ್ಟ್‌ಇಂಡೀಸ್‌ ವಿರುದ್ಧ 67ಎಸೆತಗಳಲ್ಲಿ ಶತಕ ದಾಖಲಿಸಿದ್ದರು.

ನಾಯಕ ರಿಕಿ ಪಾಂಟಿಂಗ್‌ 91 ಹಾಗೂ ಮೈಖೇಲ್‌ ಕ್ಲಾರ್ಕ್‌ 92ರನ್‌ ಗಳಿಸಿ ತಂಡದ ಮೊತ್ತವನ್ನು ಉಬ್ಬಿಸಿದರು. ಆಸ್ಟ್ರೇಲಿಯಾ ನಿಗದಿತ 50 ಓವರುಗಳಲ್ಲಿ 6ವಿಕೆಟ್‌ ಕಳೆದುಕೊಂಡು 377ರನ್‌ ಕಲೆಹಾಕಿತು.

ಗೆಲುವಿನ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಉತ್ತಮ ಆಟವನ್ನೇ ಪ್ರದರ್ಶಿಸಿತು. ಆರಂಭಿಕ ಆಟಗಾರರಾದ ನಾಯಕ ಗ್ರೇಮ್‌ ಸ್ಮಿತ್‌ ಹಾಗೂ ಎಬಿ ಡಿವಿಲಿಯರ್ಸ್‌ ಶತಕದ ಜೊತೆಯಾಟವಾಡಿ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಮಧ್ಯಮ ಕುಸಿತ ಅನುಭವಿಸಿದ್ದರಿಂದ ತಂಡ 48ಓವರುಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು ಕೇವಲ 294ರನ್‌ಗಳಿಸಲು ಮಾತ್ರ ಸಾಧ್ಯವಾಯಿತು.

ಕೊನೆಯ ಏಳು ವಿಕೆಟ್‌ಗಳು ಕೇವಲ 38ರನ್‌ಗಳಿಗೆ ಪತನಗೊಂಡವು. ಕ್ರಮಾಂಕದಲ್ಲಿ ಜಾಕ್‌ ಕಾಲಿಸ್‌ ಮಾತ್ರ ಕೊಂಚ ಪ್ರತಿರೋಧ ತೋರಿದರು. ಉಳಿದಂತೆ ಎಲ್ಲರೂ ವಿಫಲರಾದರು. ಗ್ರೇಮ್‌ ಸ್ಮಿತ್‌ ಹಾಗೂ ಎಬಿ ಡಿವಿಲಿಯರ್ಸ್‌ ಅರ್ಧಶತಕ ಬಾರಿಸಿದರಾದರೂ ಗೆಲುವಿಗೆ ಅವು ಸಾಕಾಗಲಿಲ್ಲ.

ಕೀನ್ಯಾ ವಿರುದ್ಧ ಇಂಗ್ಲೆಂಡ್‌ಗೆ ಜಯಭೇರಿ : ಸೇಂಟ್‌ ಲೂಸಿಯಾದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಕೀನ್ಯಾವನ್ನು 7ವಿಕೆಟ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಕೀನ್ಯಾ ಇಂಗ್ಲೆಂಡ್‌ ಬೌಲಿಂಗ್‌ ದಾಳಿಗೆ ತತ್ತರಿಸಿ, 43ಓವರುಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 177ರನ್‌ ಗಳಿಸಿತು. ಸ್ಟೀವ್‌ ಟಿಕೋಲೋ 76ರನ್‌ ಗಳಿಸಿದರು. ಉಳಿದಂತೆ ಎಲ್ಲ ಆಟಗಾರರೂ ವಿಫಲರಾದರು.

ಈ ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್‌ 52ರನ್‌ಗಳಾಗುವಷ್ಟರಲ್ಲಿ 2ವಿಕೆಟ್‌ ಕಳೆದುಕೊಂಡು ಕೊಂಚ ಆತಂಕದಲ್ಲಿ ಸಿಲುಕಿಕೊಂಡಿತ್ತು. ಆದರೆ ಈ ಹಂತದಲ್ಲಿ ಒಂದುಗೂಡಿದ ಎಡ್‌ ಜಾಯ್ಸ್‌ ಹಾಗೂ ಕೆವಿನ್‌ ಪೀಟರ್‌ಸನ್‌ 103ರನ್‌ಗಳ ಜೊತೆಯಾಟವಾಡಿ ತಂಡವನ್ನು ಸುರಕ್ಷಿತ ಸ್ಥಿತಿಗೆ ಕೊಂಡೊಯ್ದರು.

ಜಾಯ್ಸ್‌ 90ಎಸೆತಗಳಲ್ಲಿ 75ರನ್‌ಗಳಿಸಿ ಔಟಾದರು. ಕೆವಿನ್‌ ಪೀಟರ್‌ಸನ್‌ 72 ಎಸೆತಗಳಲ್ಲಿ 56ರನ್‌ಗಳಿಸಿ ಅಜೇಯವಾಗಿ ಉಳಿದರು. ಇಂಗ್ಲೆಂಡ್‌ 33ಓವರುಗಳಲ್ಲಿ 3ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X