ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಮೂರು ಮೆಡಿಕಲ್‌ ಕಾಲೇಜುಗಳ ಮಾನ್ಯತೆ ರದ್ದು

By Staff
|
Google Oneindia Kannada News

ಬೆಂಗಳೂರು : ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ಭಾರತದ ಮೆಡಿಕಲ್‌ ಕೌನ್ಸಿಲ್‌, ಕರ್ನಾಟಕದ ಮೂರು ಮೆಡಿಕಲ್‌ ಕಾಲೇಜುಗಳ ಮಾನ್ಯತೆಯನ್ನು ರದ್ದು ಮಾಡಿದೆ.

ಮಾರ್ಚ್‌ 10ರಂದು ಮೆಡಿಕಲ್‌ ಕೌನ್ಸಿಲ್‌ನ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಣಿಪಾಲ್‌ನ ಮೆಡಿಕಲ್‌ ಕಾಲೇಜು ಹಾಗೂ ಬೆಂಗಳೂರಿನ ಡಾ. ಬಿ. ಆರ್‌. ಅಂಬೇಡ್ಕರ್‌ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಈ ಮೂರು ಕಾಲೇಜುಗಳು ಮೂಲಭೂತ ಸೌಕರ್ಯಗಳು ಹಾಗೂ ಶಿಕ್ಷಣ ಸಿಬ್ಬಂದಿ ಕೊರತೆಯನ್ನು ಹೊಂದಿದ್ದವು ಎಂದು ಹೇಳಲಾಗಿದೆ.

ಮಣಿಪಾಲ್‌ ಹಾಗೂ ಮಂಗಳೂರಿನ ಕಾಲೇಜಿನಲ್ಲಿ 250 ಸೀಟುಗಳು ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಕಾಲೇಜಿನಲ್ಲಿ 100 ಸೀಟುಗಳು ಈಗ ಬರಿದಾಗಲಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X